ದೇಶ

ಬಿಹಾರದಲ್ಲಿ ನಿತೀಶ್ ಎನ್ ಡಿಎ ಮುಖಂಡರಾಗಲಿ: ಉಪ ಚುನಾವಣೆ ಸೋಲಿನ ಬಳಿಕ ಬಿಜೆಪಿಗೆ ಜೆಡಿಯು ಹೇಳಿಕೆ

Nagaraja AB

ಪಾಟ್ನಾ: 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಹಾರದಲ್ಲಿ ನಿತೀಶ್ ಕುಮಾರ್ ಎನ್ ಡಿಎ ಮುಂಚೂಣಿಯಲ್ಲಿರಬೇಕೆಂದು ಜೆಡಿಯು ಬಿಜೆಪಿಗೆ ಸಂದೇಶ ರವಾನಿಸಿದೆ.  ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ನಡೆದ ಉಪಚುನಾವಣೆಯಲ್ಲಿ ಸೋಲಿನ ಬಳಿಕ ಜೆಡಿಯು ಈ ರೀತಿಯ ಹೇಳಿಕೆ ನೀಡಿದೆ.

"ನಿತೀಶ್ ಕುಮಾರ್ ಅವರು ಬಿಹಾರದ ಎನ್ ಡಿಎ  ಮುಖಂಡರಾಗಿದ್ದಾರೆ, ಅದಕ್ಕಾಗಿ ಅವರು ಮುಖ್ಯಮಂತ್ರಿಯಾಗಿದ್ದಾರೆ ಜೆಡಿ-ಯು ಸಮ್ಮಿಶ್ರದ ದೊಡ್ಡ ಘಟಕವಾಗಿದೆ ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪವನ್ ವರ್ಮಾ  ಹೇಳಿದ್ದಾರೆ.

ಪಾಟ್ನಾದಲ್ಲಿಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮನೆಯಲ್ಲಿಂದು ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ  ಬಿಜೆಪಿಗೆ ಹಿನ್ನೆಡೆಯಾಗಿರುವ ಕಾರಣ   ದೊಡ್ಡ ಸಹೋದರ ಆಡುವ ಸ್ಥಿತಿಯಲ್ಲಿಲ್ಲ ಎಂದು ಒಂದಕ್ಕಿಂತ ಹೆಚ್ಚು ಮಿತ್ರರು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಯು ದೊಡ್ಡ ಮಟ್ಟದ ಸ್ಥಾನಗಳ ಹಂಚಿಕೆ ಮಾಡಿಕೊಳ್ಳಲಿದೆ. ಆದರೆ, ಎಷ್ಟು ಕ್ಷೇತ್ರಗಳಲ್ಲಿ ಯಾರು  ಸ್ಪರ್ಧಿಸಬೇಕು ಎಂಬ ಬಗ್ಗೆ ಉಭಯ ಪಕ್ಷಗಳು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು  ಎಂದು  ಹಿರಿಯ ಬಿಜೆಪಿ ನಾಯಕ ಸುಶೀಲ್ ಮೋದಿ ಹೇಳಿದ್ದಾರೆ.

SCROLL FOR NEXT