ಆರ್ ಎಸ್ ಎಸ್ ಸ್ವಯಂ ಸೇವಕರು( ಸಂಗ್ರಹ ಚಿತ್ರ) 
ದೇಶ

ಅಲ್ಪಸಂಖ್ಯಾತರನ್ನು ಓಲೈಸಲು ಸಂಘಪರಿವಾರದಿಂದ 'ಇಫ್ತಾರ್' ರಾಜಕೀಯ!

2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡಿರುವ ಆರ್ ಎಸ್ ಎಸ್ ನ ಮುಸ್ಲಿಂ ರಾಷ್ಟ್ರೀಯ ಮಂಚ್ ಘಟಕ ಇಫ್ತಾರ್ ಕೂಟ ಆಯೋಜಿಸಿದೆ....

ಲಕ್ನೋ: 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡಿರುವ ಆರ್ ಎಸ್ ಎಸ್ ನ ಮುಸ್ಲಿಂ ರಾಷ್ಟ್ರೀಯ ಮಂಚ್ ಘಟಕ ಇಫ್ತಾರ್ ಕೂಟ ಆಯೋಜಿಸಿದೆ.
ಅಯೋಧ್ಯೆಯ ಸಂತರು ಕೂಡ  ವಿವಾದಿತ ರಾಮ ಜನ್ಮಭೂಮಿ ಅಯೋಧ್ಯೆಯ 500 ವರ್ಷ ಹಳೇಯದಾದ ಸರ್ಯೂ ಕುಂಜ್ ದೇವಾಲಯದ ನಿವೇಶನದಲ್ಲಿ  ಇಫ್ತಾರ್ ಕೂಟ ಆಯೋಜಿಸಿತ್ತು. ಅವಳಿ ನಗರಗಳಾದ ಅಯೋಧ್ಯೆ ಮತ್ತು ಫೈಜಾಬಾದ್ ನ ಮುಸ್ಲಿಮರು ಈ ಕೂಟದಲ್ಲಿ ಪಾಲ್ಗೋಂಡಿದ್ದರು.
ಕಾಶ್ಮೀರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರಣಿ ಇಫ್ತಾರ್ ಕೂಟ ಆಯೋಜಿಸಲು ಮುಸ್ಲಿಂ ರಾಷ್ಟ್ರೀಯ ಮಂಚ್ ನಿರ್ದರಿಸಿದೆ. ಯಾವುದೇ ರಾಜಕೀಯ ಪ್ರಲೋಭನೆಗೆ ಒಳಗಾಗದೇ ಎರಡು ಸಮುದಾಯಗಳು ಸಾಮರಸ್ಯದಿಂದ ಇರಬೇಕು ಎಂಬ ಸಂದೇಶವನ್ನು ಅಯೋಧ್ಯೆಯಲ್ಲಿರುವ ಸ್ವಾಮೀಜಿಗಳು ರವಾನಿಸಿದ್ದಾರೆ.
ಎಲ್ಲರೂ ಶಾಂತಿಯಿಂದ ಇರಬೇಕು ಎಂಬುದೇ ನಮ್ಮ ಉದ್ದೇಶ, ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಶಾಂತಿ ಸಂದೇಶ ಸಾರುವುದೇ ನಮ್ಮ ಪ್ರಮುಖ ಉದ್ದೇಶ ಎಂದು ಸರ್ಯು ಕುಂಚ್ ದೇವಾಲಯದ ಪ್ರಧಾನ ಅರ್ಚಕ ಕಿಶೋರ್ ಶರ್ ಶಾಸ್ತ್ರಿ ಹೇಳಿದ್ದಾರೆ.
ದೇವಾಲಯದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಸಾಂಪ್ರಾದಾಯಿಕವಾದ ಖರ್ಜೂರ ಮತ್ತು ಲಡ್ಡುಗಳನ್ನು ಹಂಚಲಾಯಿತು. ಎರಡು ,ಸಮುದಾಯಗಳ ನಡುವೆ ಬೆಳಎದಿರುವ ಅಂತರವನ್ನು ಕಡಿಮೆ ಮಾಡಲು ಇಫ್ತಿಹಾರ್ ಕೂಟದ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ಮಹಂತ್ ರಘುಶರಣ್ ದಾಸ್ ಹೇಳಿದ್ದಾರೆ.
ಇನ್ನೂ ಉಪವಾಸವಿದ್ದ ಮುಸ್ಲಿಮರಿಗೆ ಹಸುವಿನ ಹಾಲು ಹಾಗೂ ಖರ್ಜೂರ ನೀಡಲಾಯಿತು. ಈ ವೇಳೆ ತಮ್ಮ ಮನೆಯಲ್ಲಿ ತುಳಸಿ ಗಿಡ ಬೆಳೆಸುವುದಾಗಿ ಹಲವು ಮುಸ್ಲಿಮರು ಪ್ರತಿಜ್ಞೆ ಮಾಡಿದರು. ಮುಸ್ಲಿಂ ರಾಷ್ಟ್ರೀಯ ಮಂಚ್ ಸೋಮವಾರ ಮುಂಬಯಿಯಲ್ಲಿ ಆಯೋಜಿಸಲಾಗಿತ್ತು.
ಇಂದು ಕೊಲ್ಕೊತ್ತಾದಲ್ಲಿ, ಬುಧಾವರ ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ  ಇಫ್ತಾರ್ ಕೂಟ ಆಯೋಜಿಸಲಾಗಿದೆ.
ಆರ್ ಎಸ್ ಎಸ್ ಅಲ್ಪಸಂಖ್ಯಾತ ವಿರೋಧಿ ಎಂಬ ಮನೋಭಾವನೆಯನ್ನು ಹೋಗಲಾಡಿಸಲು ಇಫ್ತಿಹಾರ್ ಕೂಟ ಏರ್ಪಡಿಸಲಾಗಿದೆ. ರಾಜಕೀಯ ಪಕ್ಷಗಳು ಸಂಘ ಪರಿವಾರದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಮುಸ್ಲಿಮ್ ಸಮುದಾಯವನ್ನು ತಲುಪಲು ಆರ್ ಎಸ್ ಎಸ್ ಮುಖ್ಯಸ್ಥ ಕೆ. ಸುದರ್ಶನ್ 2002ರಲ್ಲಿ ಮುಸ್ಲಿಮ್ ರಾಷ್ಚ್ರೀಯ ಮಂಚ್  ಸ್ಥಾಪಿಸಿದರು. ಉತ್ತರ ಪ್ರದೇಶದ ಉಪ ಚುನಾವಣೆಗಳಲ್ಲಿ ನಿರಂತರ ಸೋಲು ಅನುಭವಿಸಿರುವ ಬಿಜೆಪಿ ಅಲ್ಪಸಂಖ್ಯಾತರನ್ನು ಓಲೈಸಲು ಇಫ್ತಾರ್ ಕೂಟವನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT