ದೇಶ

ಯುಪಿ ಸಿಎಂಗೆ ರಾಜ್ಯಪಾಲರ ಕಚೇರಿಯಿಂದ ಬಂದಿದ್ದ ಗೌಪ್ಯ ಪತ್ರ ಸೋರಿಕೆ, ಸಿಎಂಒ ಅಧಿಕಾರಿ ವಿರುದ್ಧವೇ ತನಿಖೆಗೆ ಸೂಚನೆ

Srinivas Rao BV
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ರಾಜ್ಯಪಾಲರ ಕಚೇರಿಯಿಂದ ಹೋಗಿದ್ದ ಗೌಪ್ಯ ಪತ್ರ ಸೋರಿಕೆಯಾಗಿದೆ. 
ಮುಖ್ಯಮಂತ್ರಿಗಳ ಕಚೇರಿಯಲ್ಲಿರುವ ಪ್ರಧಾನ ಕಾರ್ಯದರ್ಶಿಗಳ ವಿರುದ್ಧವೇ ತನಿಖೆ ನಡೆಸಲು ಸೂಚಿಸಲಾಗಿರುವುದು ಈ ಪತ್ರದ ಮೂಲಕ ತಿಳಿದುಬಂದಿದೆ. ಹಿರಿಯ ಐಎಎಸ್ ಅಧಿಕಾರಿಯಾಗಿರುವ ಎಸ್ ಪಿ ಗೋಯಲ್ ವಿರೌದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಮುಖ್ಯಮಂತ್ರಿಗಲ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಿಸುತ್ತಿರುವ ಅಧಿಕಾರಿ ವಿರುದ್ಧ ತನಿಖೆಗೆ ಸೂಚಿಸಲಾಗಿದೆ. 
ಪ್ರಧಾನ ಕಾರ್ಯದರ್ಶಿ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಹಿರಿಯ ಐಎಎಸ್ ಅಧಿಕಾರಿ ಎಸ್ ಪಿ ಗೋಯೆಲ್ ವಿರುದ್ಧದ ಲಾಭಿಯ ವಿರುದ್ಧ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಗೆ ರಾಜ್ಯಪಾಲರ ಪತ್ರ ವಿಪಕ್ಷಗಳಿಗೆ ಆಹಾರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಆದರೆ ರಾಜಭವನದ ಮೂಲಗಳ ಪ್ರಕಾರ ರಾಜ್ಯಪಾಲರಿಗೆ ಬರುವ ಸಾರ್ವಜನಿಕ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಿಸಲಾಗುತ್ತದೆ, ಇದೊಂದು ಸಾಮಾನ್ಯ ಪ್ರಕ್ರಿಯೆಯಾಗಿದೆ, ಅದರಂತೆಯೇ ಈಗಲೂ ಪತ್ರವನ್ನು ಕಳಿಸಲಾಗಿದೆ. ಅಖಿಲೇಶ್ ಯಾದವ್ ಸಿಎಂ ಆಗಿದ್ದಾಗಲೂ ಇಂಥಹದ್ದೇಪ್ರಕರಣ ನಡೆದಿತ್ತು. ಆಗಲೂ ಹಿರಿಯ ಐಎಎಸ್ ಅಧಿಕಾರಿಯಾಗಿದ್ದವರ ವಿರುದ್ಧ ಬಂದಿದ್ದ ಅನಾಮಧೇಯ ಪತ್ರ ಎಸ್ ಪಿ ಸರ್ಕಾರಕ್ಕೆ ಮುಜುಗರ ಉಂಟುಮಾಡಿತ್ತು. 
SCROLL FOR NEXT