ದೇಶ

ಶರದ್ ಯಾದವ್ ಗೆ ವೇತನ-ಭತ್ಯೆ ತಡೆಹಿಡಿಯಿರಿ: ಸುಪ್ರೀಂಕೋರ್ಟ್

Shilpa D
ನವದೆಹಲಿ: ಬಿಹಾರ ಜೆಡಿಯು ಮಾಜಿ ಮುಖಂಡ ಶರದ್ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ  ತೀವ್ರ ಹಿನ್ನಡೆಯಾಗಿದೆ.
ಶರದ್ ಯಾದವ್ ಅವರಿಗೆ ವೇತನ, ಭತ್ಯೆ ಹಾಗೂ ವಿಮಾನ ಹಾಗೂ ರೈಲ್ವೆ ಟಿಕೆಟ್ ಭತ್ಯೆ ನೀಡಬಾರದು ಎಂದು ಹೇಳಿದೆ. ಜೊತೆಗೆ ಜುಲೈ 12ರೊಳಗೆ ತಮ್ಮ ಅಧಿಕೃತ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲು ಅವಕಾಶ ನೀಡಿದೆ. 
ರಾಜ್ಯ ಸಭೆ ಸದಸ್ಯತ್ವನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಶರದ್ ಯಾದವ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್ ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಅದರ್ಶ್ ಕುಮಾರ್ ಗೋಯೆಲ್ ಅ ಮತ್ತು ಅಶೋಕ್ ಭೂಷಣ್ ಅವರಿದ್ದ  ನ್ಯಾಯಪೀಠ ಈ ಆದೇಶ ಹೊರಡಿಸಿದೆ. ನವದೆಹಲಿಯಲ್ಲಿರುವ ತಮ್ಮ ಅಧಿಕೃತ ಸರ್ಕಾರಿ ಬಂಗಲೆಯಲ್ಲಿ ಶರದ್ ಯಾದವ್ ಮುಂದುವರಿಯುಂತೆ ನೀಡಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜೆಡಿಯು ಸುಪ್ರಿಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು 
ಬಿಹಾರದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಜತೆಗಿನ ಮಹಾಮೈತ್ರಿ ತೊರೆದು ಎನ್‌ಡಿಎ ತೆಕ್ಕೆಗೆ ಸೇರಿದ ನಿತೀಶ್‌ ಕುಮಾರ್‌ ಅವರ ನಿಲುವನ್ನು ಶರದ್‌ ಯಾದವ್‌ ಬಹಿರಂಗವಾಗಿ ಟೀಕಿಸಿದ್ದರು. ಈ ಬೆಳವಣಿಗೆಯ ನಂತರ ಇಬ್ಬರು ನಾಯಕರು ಮುನಿಸಿಕೊಂಡಿದ್ದರು. ಶರದ್‌  ವಿರೋಧ ಪಕ್ಷಗಳ ಜತೆ ಗುರುತಿಸಿಕೊಂಡಿದ್ದರು. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತ ಅವರು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
SCROLL FOR NEXT