ಸಂಗ್ರಹ ಚಿತ್ರ 
ದೇಶ

ಲಗೇಜ್ ಹೆಚ್ಚಿದ್ದರೆ 6 ಪಟ್ಟು ದಂಡ: ಆಕ್ರೋಶಕ್ಕೆ ಮಣಿದು ನಿರ್ಧಾರ ಹಿಂಪಡೆದ ರೈಲ್ವೆ ಇಲಾಖೆ

ಪ್ರಯಾಣಿಕರ ಲಗೇಜ್ ಹೆಚ್ಚಾಗಿದ್ದರೆ 6 ಪಟ್ಟು ದಂಡ ವಿಧಿಸುವುದಾಗಿ ಹೇಳಿದ್ದ ರೈಲ್ವೇ ಇಲಾಖೆ ಇದೀಗ ಯೂಟರ್ನ್ ಹೊಡೆದಿದ್ದು, ದಂಡ ವಿಧಿಸುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದೆ.

ನವದೆಹಲಿ: ಪ್ರಯಾಣಿಕರ ಲಗೇಜ್ ಹೆಚ್ಚಾಗಿದ್ದರೆ 6 ಪಟ್ಟು  ದಂಡ ವಿಧಿಸುವುದಾಗಿ ಹೇಳಿದ್ದ ರೈಲ್ವೇ ಇಲಾಖೆ ಇದೀಗ ಯೂಟರ್ನ್ ಹೊಡೆದಿದ್ದು, ದಂಡ ವಿಧಿಸುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದೆ.
ಈ ಹಿಂದೆ ಪ್ರಯಾಣಿಕರು ತಮ್ಮೊಂದಿಗೆ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಲಗೇಜ್ ಗಳನ್ನು ರೈಲಿನಲ್ಲಿ​ ಕೊಂಡೊಯ್ದರೆ ಲಗೇಜ್​ ಶುಲ್ಕದ 6 ಪಟ್ಟು ದಂಡ ವಿಧಿಸಲಾಗುವುದು  ಎಂದು ರೈಲ್ವೆ ಇಲಾಖೆ ಇತ್ತೀಚೆಗೆ ತಿಳಿಸಿತ್ತು. ಇಲಾಖೆಯ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ರೈಲ್ವೆ ಇಲಾಖೆ ದಂಡ ವಿಧಿಸುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದೆ.
ಇನ್ನು ಈ ಹಿಂದೆ ಜೂನ್​ 1 ರಿಂದ ಹೆಚ್ಚುವರಿ ಲಗೇಜ್​ ಕೊಂಡೊಯ್ಯುವವರನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂದರ್ಭದಲ್ಲಿ ಸ್ಲೀಪರ್ ಬೋಗಿ ಪ್ರಯಾಣಿಕರು 40 ಕೆ.ಜಿ. ಮತ್ತು ಎರಡನೇ ದರ್ಜೆ ಬೋಗಿಗಳಲ್ಲಿ ಪ್ರಯಾಣಿಸುವವರು 35 ಕೆ.ಜಿ. ತೂಕದ ಲಗೇಜನ್ನು ಶುಲ್ಕವಿಲ್ಲದೇ ಮತ್ತು ಎಸಿ ಕೋಚ್ ನ ಪ್ರಯಾಣಿಕರು 70 ಕೆಜಿ ವರೆಗಿನ ಶುಲ್ಕ ರಹಿತ ಲಗೇಜನ್ನು ಗರಿಷ್ಟ 150 ಕೆಜಿ ವರಿಗಿನ ಶುಲ್ಕ ಸಹಿತ ಲಗೇಜನ್ನು ಕೊಂಡೊಯ್ಯಬಹುದು. 30 ವರ್ಷಗಳ ಹಿಂದೆಯೇ ಈ ನಿಯಮ ರೂಪಿಸಲಾಗಿದ್ದು, ಇನ್ಮುಂದೆ ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದರು.
ರೈಲ್ವೆ ಇಲಾಖೆ ಹೆಚ್ಚಿನ ಲಗೇಜ್​ ಕೊಂಡೊಯ್ಯದಂತೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನ ನಡೆಸಿತ್ತು. ಈ ಮೂಲಕ ಹೆಚ್ಚಿನ ಲಗೇಜ್​ ತೆಗೆದುಕೊಂಡು ಹೋಗುವುದರಿಂದ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬುದನ್ನು ಪ್ರಯಾಣಿಕರಿಗೆ ಮನದಟ್ಟು ಮಾಡಿಕೊಡುವುದು ನಮ್ಮ ಉದ್ದೇಶವಾಗಿತ್ತು ಎಂದು ರೈಲ್ವೆ ಇಲಾಖೆಯ ವಕ್ತಾರ ರಾಜೇಶ್​ ಬಾಜಪೇಯಿ ತಿಳಿಸಿದ್ದಾರೆ. 
ಇಲಾಖೆಯ ಈ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇಲಾಖೆ ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Women's Reservation Bill: ಮಹಿಳೆಯರ ಕೋಪ ತಟ್ಟದೇ ಬಿಡಲ್ಲ..; ವಿಪಕ್ಷಗಳ ವಿರುದ್ಧ Amit Shah ಕೆಂಡಾಮಂಡಲ!

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು; ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ NDA ವಿಫಲ

Mysuru: ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತಿದ್ದ ಚಿರತೆ, ವೃದ್ಧ ತಾಯಿಯ ಹೊರಗೆಳೆದ ಮಗಳು, ಕಾರ್ಯಾಚರಣೆಯೇ ರೋಚಕ!

IPL 2026: KKR ವಿರುದ್ಧ GT ಗೆ 5 ವಿಕೆಟ್ ಜಯ, ಗಿಲ್ ಭರ್ಜರಿ ಬ್ಯಾಟಿಂಗ್

ಇರಾನ್ ಮಹತ್ವದ ನಿರ್ಧಾರ: ಹಾರ್ಮುಜ್ ಜಲಸಂಧಿ ನಿರ್ಬಂಧ ಸಂಪೂರ್ಣ ತೆರವು; ವಿದೇಶಾಂಗ ಸಚಿವರ ಘೋಷಣೆ!

SCROLL FOR NEXT