ದೇಶ

ಪಾಕಿಸ್ತಾನದಿಂದ ಒಂದೇ ವರ್ಷದಲ್ಲಿ ಬರೊಬ್ಬರಿ 1,000 ಕದನ ವಿರಾಮ ಉಲ್ಲಂಘನೆ!

Srinivas Rao BV
ನವದೆಹಲಿ: ಪಾಕಿಸ್ತಾನ ಒಂದೇ ವರ್ಷದಲ್ಲಿ ಬರೊಬ್ಬರಿ 1,000 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. 
ಪಾಕ್ ಕದನ ವಿರಾಮ ಉಲ್ಲಂಘನೆ ಮಾಡಿರುವುದರ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಮಾಹಿತಿ ನೀಡಿದ್ದು ಪಾಕಿಸ್ತಾನ 2003 ರ ಒಪ್ಪಂದಕ್ಕೆ ಬದ್ಧವಾಗಿರಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಭಯೋತ್ಪಾದಕರಿಗೆ ಒಳನುಸುಳುವುದಕ್ಕೆ ಸಹಕಾರಿಯಾಗಲೆಂದು ಪಾಕಿಸ್ತಾನಿ ಸೈನಿಕರು ಕದನ ವಿರಾಮ ಉಲ್ಲಂಘನೆ ಮಾಡುತ್ತಾರೆ. 
2018 ರಲ್ಲಿ 1,000 ಕ್ಕೂ ಹೆಚ್ಚು ಕದನ ವಿರಾಮ ಉಲ್ಲಂಘನೆ ಮಾಡಿದೆ. ಆದರೂ ಸಹ ಪಾಕಿಸ್ತಾನ 2003 ರ ಒಪ್ಪಂದಕ್ಕೆ ಬದ್ಧವಾಗಿರುತ್ತದೆ ಎಂದು ಭಾವಿಸುತ್ತೇವೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ. ಕಳೆದ ವಾರ ಭಾರತ-ಪಾಕಿಸ್ತಾನದ ನಡುವೆ ನಡೆದ ಡಿಜಿಎಂಒ ಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪವಾಗಿದ್ದು 2003 ರ ಕದನ ವಿರಾಮ ಉಲ್ಲಂಘನೆ ಒಪ್ಪಂದವನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಉಭಯ ರಾಷ್ಟ್ರಗಳ ಸೇನಾ ಅಧಿಕಾರಿಗಳೂ ಒಪ್ಪಿಗೆ ಸೂಚಿಸಿದ್ದಾರೆ. 
SCROLL FOR NEXT