ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ 
ದೇಶ

ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯ ಸ್ಥಿರವಾಗಿದೆ; ಏಮ್ಸ್ ಅಧಿಕೃತ ಹೇಳಿಕೆ

ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಆರೋಗ್ಯ ಸ್ಥಿರವಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ಸಂಸ್ಥೆ ಸೋಮವಾರ ಹೇಳಿದೆ...

ನವದೆಹಲಿ; ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಆರೋಗ್ಯ ಸ್ಥಿರವಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ಸಂಸ್ಥೆ ಸೋಮವಾರ ಹೇಳಿದೆ. 
ಹಲವು ದಿನಗಳಿಂದಲೂ ಅನಾರೋಗ್ಯದಿಂದ ಬಳುತ್ತಿರುವ ವಾಜಪೇಯಿಯವರು ಇಂದು ಬೆಳಿಗ್ಗೆಯಷ್ಟೇ ರಾಜಧಾನಿ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. 
ಇದೀಗ ವಾಜಪೇಯಿಯವರ ಆರೋಗ್ಯ ಕುರಿತಂತೆ ಅಧಿಕೃತ ಹೇಳಿಕೆ ನೀಡಿರುವ ಏಮ್ಸ್ ಅಧಿಕಾರಿಗಳು, ಅಟಲ್ ಬಿಹಾರಿ ವಾಜಪೇಯಿಯವರ ಆರೋಗ್ಯ ಸ್ಥಿರವಾಗಿದೆ. ಡಾ.ರಣ್'ದೀಪ್ ಗುಲಾರಿಯಾ ನೇತೃತ್ವದ ವೈದ್ಯ ಸಮೂಹ ವಾಜಪೇಯಿಯವರ ಆರೋಗ್ಯ ಬಗ್ಗೆ ನಿಗಾವಹಿಸಿದ್ದಾರೆಂದು ಹೇಳಿದೆ. 
ಈ ಕುರಿತು ಮಾತನಾಡಿರುವ ಏಮ್ಸ್ ನಿರ್ದೇಶಕ, ವಾಜಪೇಟಿಯವರು ದೈನಂದಿನ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿಸಿದ್ದಾರೆ. 
ಮಧ್ಯಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣ ದೇವಿ ದಂಪತಿಗಳ ಮಗನಾಗಿ ವಾಜಪೇಯಿಯವರು ಡಿಸೆಂಬರ್ 25. 1924ರಂದು ಗ್ವಾಲಿಯರ್ನಲ್ಲಿ ಜನಿಸಿದ್ದರು. 
ಹದಿಹರೆಯದ ವಯಸ್ಸಿನಲ್ಲಿಯೇ ಬ್ರಿಟೀಷರ ವಿರುದ್ಧ ಹೋರಾಡಿ ಜೈಲಿ ಸೇರಿದ್ದರು. ಬ್ರಿಟೀಷರ ವಿರುದ್ಧ ಹೋರಾಟದ ಹೊತ್ತಿನಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಜನ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. 
1942-1945 ರ ಕ್ವಿಟ್ ಇಂಡಿಯಾ ಚಳವಳಿಯ ಹೊತ್ತಲ್ಲಿ ವಾಜಪೇಯಿ ರಾಜಕೀಯಕ್ಕೆ ಧುಮುಕಿದ್ದರು. ಮೊದಲಿಗೆ ಕಮ್ಯುನಿಸ್ಟ್ ಆಗಿದ್ದ ಇವರು ಆಮೇಲೆ ಆರೆಸ್ಸೆಸ್ಸ್ ಸೇರಿದ್ದರು. 1957 ರಿಂದ 2009ರ ವರೆಗೆ ಲೋಕಸಭೆ, ಸಂಸತ್ನ ಕೆಳಮನೆಯಲ್ಲಿ ವಾಜಪೇಯಿ ಅವರು ಸೇವೆ ಸಲ್ಲಿಸಿದರು. 1998ರಲ್ಲಿ 13 ತಿಂಗಳುಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಎಐಎಡಿಎಂಕೆ ನೇತಾರೆ ಜೆ. ಜಯಲಲಿತಾ ಅವರ ಬೆಂಬಲ ವಾಪಸ್ ತೆಗೆದುಕೊಂಡಾಗ ಮತ್ತೆ ಬಿತ್ತು. 4 ದಶಕಗಳ ಕಾಲ ವಿಪಕ್ಷದಲ್ಲಿದ್ದ ಬಿಜೆಪಿ 1996ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಅಧಿಕಾರಕ್ಕೇರಿತು. ಆದರೆ ಈ ಸರ್ಕಾರ 13 ದಿನಗಳ ಕಾಲವಷ್ಟೇ ಅಧಿಕಾರ ನಡೆಸಿತು. 1999ರಲ್ಲಿ ಮತ್ತೆ ವಾಜಪೇಯಿ ಸರ್ಕಾರ  ಅಧಿಕಾರಕ್ಕೇರಿ 5 ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನ 'ಮುಕುಟ'ದಂತಿದ್ದ ಖಾರ್ಗ್ ಮೇಲೆ ಬಾಂಬ್ ದಾಳಿ: ದ್ವೀಪ ಸಂಪೂರ್ಣ ಧ್ವಂಸ; ಮಾಹಿತಿ ಹಂಚಿಕೊಂಡ ಟ್ರಂಪ್

ಟ್ರಂಪ್ ಎಚ್ಚರಿಕೆಗೆ ತಲೆಬಾಗದ ಇರಾನ್​: ಸೌದಿ ನೆಲೆಯಲ್ಲಿ ಕ್ಷಿಪಣಿ ದಾಳಿ; ಅಮೆರಿಕಾದ 5 ಟ್ಯಾಂಕರ್ ವಿಮಾನಗಳಿಗೆ ಹಾನಿ..!

ಮಂಡಿಯೂರಿದ ಕೇಂದ್ರ ಸರ್ಕಾರ: ಜೈಲಿನಲ್ಲಿದ್ದ Sonam Wangchuk ಗೆ ಕೊನೆಗೂ ಬಂಧನದಿಂದ ಮುಕ್ತಿ: ಕೇಂದ್ರ ಹೇಳಿದ್ದೇನು?

ಇರಾನ್ ಜೊತೆಗೆ ಸರಣಿ ಮಾತುಕತೆ: ಹಾರ್ಮುಜ್ ಜಲಸಂಧಿ ದಾಟಿದ LPG ಹೊತ್ತ ಭಾರತದ 2 ಹಡಗುಗಳು!

West Asia conflict effect: LPG ಕೊರತೆ ತೀವ್ರ; ಮನೆಗಳಲ್ಲಿ PNG, ಹೋಟೆಲ್ ಗಳು ಕಲ್ಲಿದ್ದಲು ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ

SCROLL FOR NEXT