ದೇಶ

ಪಿಎನ್ ಬಿ ಹಗರಣ: ನೀರವ್‌ ಮೋದಿ ವಿರುದ್ಧ ಜಾಮೀನು ರಹಿತ ವಾರಂಟ್‌

Lingaraj Badiger
ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಗೆ 13 ಸಾವಿರ ಕೋಟಿ ರು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ವಿರುದ್ಧ ಮುಂಬೈ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದೆ.
ಮುಂಬೈನ ಪಿಎಂಎಲ್ ಎ ವಿಶೇಷ ಕೋರ್ಟ್ ಇಂದು ನೀರವ್ ಮೋದಿ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಜಾರಿ ಮಾಡಿದೆ.
ನಿನ್ನೆಯಷ್ಟೇ ವಿದೇಶದಲ್ಲಿ ತಲೆಮರೆಸಿಕೊಂಡಿರುವ ನೀರವ್‌ ಮೋದಿ ವಿರುದ್ಧ ತ್ವರಿತವಾಗಿ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸುವಂತೆ ಸಿಬಿಐ ಇಂಟರ್‌ ಪೋಲ್‌ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ನ್ಯಾಯಾಲಯ ಈ ಆದೇಶ ಮಾಡಿದೆ.
ಪಿಎನ್‌ಬಿ ಹಗರಣದ ಸಂಚುಕೋರ ನೀರವ್‌ ಮೋದಿ ಬ್ರಿಟನ್ ನಲ್ಲಿ ಇರುವುದನ್ನು ಅಲ್ಲಿನ ಸರ್ಕಾರ ಖಚಿತಪಡಿಸಿದೆ. ಅವರನ್ನು ದೇಶಕ್ಕೆ ಆದಷ್ಟು ಬೇಗ ಹಸ್ತಾಂತರಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆಯನ್ನೂ ನೀಡಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
SCROLL FOR NEXT