ದೇಶ

ಕದನ ವಿರಾಮ ಉಲ್ಲಂಘನೆ: ಭಾರತಕ್ಕೆ ಸಮನ್ಸ್ ನೀಡಿದ್ದ ಪಾಕಿಸ್ತಾನ

Nagaraja AB
ಜಮ್ಮು-ಕಾಶ್ಮೀರ:  ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಭಾರತ ಕದನ ವಿರಾಮ ಉಲ್ಲಂಘಿಸಿದೆ ಎಂದು ಪಾಕಿಸ್ತಾನ ಆರೋಪಿಸಿದ್ದು, ಭಾರತದ ಉಪ ಹೈ ಕಮೀಷನರ್ ಗೆ  ಸಮನ್ಸ್ ನೀಡಿದೆ.
ಜಮ್ಮು-ಕಾಶ್ಮೀರದ ಚಾಂಬ್ಲಿಯಲ್ ಸೆಕ್ಟರ್ ಬಳಿ ಪಾಕಿಸ್ತಾನಿ ಯೋಧರು ನಡೆಸಿದ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆಯ ನಾಲ್ವರು ಯೋಧರು ಮೃತಪಟ್ಟಿದ್ದಾರೆ.  ಇವರೆಲ್ಲರೂ ಬಿಎಸ್ ಎಫ್ ನ ಸಹಾಯಕ ಕಮಾಂಡೆಂಟ್ ಆಗಿದ್ದಾರೆ.
2003ರ  ಕದನ ವಿರಾಮ ಒಪ್ಪಂದ ಅನುಷ್ಠಾನಕ್ಕೆ ಉಭಯ ದೇಶಗಳ ಉನ್ನತ ಹಿರಿಯ ಸೇನಾ ಅಧಿಕಾರಿಗಳು ಸಭೆಯ ನಡೆದಿದ್ದು ಒಂದು ವಾರದ ನಂತರ ದೊಡ್ಡ ಮಟ್ಟದ ಕದನ ವಿರಾಮ ಉಲ್ಲಂಘನೆ ನಡೆದಿದೆ.
ಕದನ ವಿರಾಮ ಯಾವಾಗೂ ದ್ವಿಪಕ್ಷೀಯ ನಿರ್ಧಾರದಿಂದ ನಡೆಯಲಿದ್ದು, ಕದನ ವಿರಾಮದ ಪವಿತ್ರತೆ ಕಾಪಾಡಲು ಯಾವಾಗಲೂ ಪ್ರಯತ್ನಿಸುತ್ತೇವೆ. ಆದರೆ,  ಪಾಕಿಸ್ತಾನ ಇದನ್ನು ಉಲ್ಲಂಘಿಸುತ್ತಲೇ ಇದೆ.  ಕದನ ವಿರಾಮ ಇರಲಿ ಅಥವಾ ಇಲ್ಲದಿರಲಿ ನಾವು ಯಾವಾಗಲೂ ಸಿದ್ದರಿದ್ದೇವೆ.  ದೇಶದ ಸಮಗ್ರತೆ ಕಾಪಾಡಲೂ ಎಲ್ಲ ಆಯುಧಗಳು ಅಗತ್ಯವಾಗಿದೆ ಎಂದು ಬಿಎಸ್ ಎಫ್ ಎಡಿಜಿ ಕಮಲ್ ನಾಥ್  ಚೌಬೆ ಹೇಳಿದ್ದಾರೆ.
 ರಾಮಘರ್ ನ ಅಂತಾರಾಷ್ಟ್ರೀಯ ಗಡಿಯಲ್ಲಿ ಕಳೆದ ರಾತ್ರಿ ಪಾಕಿಸ್ತಾನ ರೆಂಜರ್ಸ್ ಉದ್ದೇಶಪೂರ್ವಕವಾಗಿ ಗಡಿ ದಾಟಿ ಗುಂಡಿನ ದಾಳಿ ನಡೆಸಿದ್ದಾರೆ. ನಾಲ್ಕು ಮಂದಿ ಯೋಧರನ್ನು ಕಳೆದುಕೊಂಡಿದ್ದು, ಇನ್ನಿತರ ಮೂವರ ಸೈನಿಕರು ಗಾಯದಿಂದ ನರಳುತ್ತಿದ್ದಾರೆ ಎಂದು ಬಿಎಸ್ ಎಫ್ ಐಜಿ ರಾಮ್ ಅವಾತರ್ ಹೇಳಿದ್ದಾರೆ.
SCROLL FOR NEXT