ಸಾಂದರ್ಭಿಕ ಚಿತ್ರ 
ದೇಶ

ಬಿಹಾರ: ವೈದ್ಯನನ್ನು ಮರಕ್ಕೆ ಕಟ್ಟಿ, ಆತನ ಪತ್ನಿ, ಮಗಳ ಮೇಲೆ ಗ್ಯಾಂಗ್ ರೇಪ್

ಶಸ್ತ್ರ ಸಜ್ಜಿತ ದುಷ್ಕರ್ಮಿಗಳ ತಂಡವೊಂದು ವೈದ್ಯನನ್ನು ಮರಕ್ಕೆ ಕಟ್ಟಿಹಾಕಿ, ಆತನ ಕಣ್ಣೇದುರಿಗೆ ಪತ್ನಿ ಹಾಗೂ 15 ವರ್ಷದ ಮಗಳ....

ಪಾಟ್ನಾ: ಶಸ್ತ್ರ ಸಜ್ಜಿತ ದುಷ್ಕರ್ಮಿಗಳ ತಂಡವೊಂದು ವೈದ್ಯನನ್ನು ಮರಕ್ಕೆ ಕಟ್ಟಿಹಾಕಿ, ಆತನ ಕಣ್ಣೇದುರಿಗೆ ಪತ್ನಿ ಹಾಗೂ 15 ವರ್ಷದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಸಂಜೆ ತನ್ನ ಖಾಸಗಿ ಕ್ಲಿನಿಕ್ ನಿಂದ ದ್ವಿಚಕ್ರ ವಾಹನದಲ್ಲಿ ಪತ್ನಿ ಮತ್ತು ಮಗಳೊಂದಿಗೆ ಮನಗೆ ಬರುತ್ತಿದ್ದಾಗ ಕೊಂಚ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊಂದಿಹಾ ಗ್ರಾಮದಲ್ಲಿ ಗೂಂಡಾಗಳು ಅವರನ್ನು ತಡೆದು, ಚಿನ್ನಾಭರಣ, ನಗದು ದೋಚಿದ್ದಾರೆ. ಬಳಿಕ ಪತ್ನಿ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗೂಂಡಾಗಳು ಸೊಂದಿಹಾ ಅಥವಾ ಸುತ್ತಮುತ್ತಲಿನ ಗ್ರಾಮದವರಾಗಿಬೇಕು ಎಂದು ಪೊಲೀಸರು ನಂಬಿದ್ದಾರೆ. 
ಸಂತ್ರಸ್ತರ ಪ್ರಕಾರ, ಈ ಘಟನೆಗೂ ಕೆಲ ನಿಮಿಷಗಳ ಮುನ್ನ ಆ ಗೂಂಡಾಗಳು ಹಾದು ಹೋಗುತ್ತಿದ್ದ ಇತರ ಇಬ್ಬರು ಪುರುಷರನ್ನು ದೋಚಿ, ಸೆರೆಯಲ್ಲಿಟ್ಟುಕೊಂಡಿದ್ದರು. 
ಗೂಂಡಾಗಳಿಗೆ ನಮ್ಮಲ್ಲಿರುವ ಬೆಲೆ ಬಾಳುವ ವಸ್ತು ಮತ್ತು ನಗದು ತೆಗೆದುಕೊಂಡು ನಮ್ಮನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡೆವು. ಆದರೂ ಕೇಳದ ದುಷ್ಕರ್ಮಿಗಳು ನನ್ನನ್ನು ಮತ್ತು ನನ್ನ ಮಗಳನ್ನು ಹೋಲದಲ್ಲಿ ಎಳೆದೊಯ್ದು ಅತ್ಯಾಚಾರ ಎಸಗಿದರು ವೈದ್ಯರ ಪತ್ನಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ಗೂಂಡಾಗಳು ಘಟನೆ ಬಗ್ಗೆ ಪೊಲೀಸರಿಗೆ ತಿಳಿಸದಂತೆ ವೈದ್ಯರಿಗೆ ಎಚ್ಚರಿಕೆ ನೀಡಿದ್ದರು. ಆದರೂ ಘಟನೆ ನಡೆದ ಕೆಲ ನಿಮಿಷಗಳಲ್ಲೇ ವೈದ್ಯ ತನ್ನ ಮೊಬೈಲ್ ನಿಂದ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಗಯಾ ಎಸ್ ಎಸ್ ಪಿ ರಾಜೀವ್ ಮಿಶ್ರಾ ಮತ್ತು ಎಸ್ ಡಿಪಿಒ ಮನಿಶ್ ಕುಮಾರ್ ಅವರು, ಇಬ್ಬರು ಅತ್ಯಾಚಾರ ಸಂತ್ರಸ್ಥೆಯರನ್ನು ಗಯಾದಲ್ಲಿರುವ ಅನುಗ್ರಹ ನಾರಾಯಣ ಮಗಧ್ ವೈದ್ಯಕೀಯ ಕಾಲೇಜ್ ಗೆ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಸೊಂದಿಹ ಮತ್ತು ಸಮೀಪದ ಎರಡು ಹಳ್ಳಿಗಳಲ್ಲಿ ದಾಳಿ ನಡೆಸಿ, 20 ಶಂಕಿತರನ್ನು ಬಂಧಿಸಲಾಗಿದೆ. ಸಂತ್ರಸ್ಥರು ಆ ಪೈಕಿ ಇಬ್ಬರ ಗುರುತು ಪತ್ತೆ ಹಚ್ಚಿದ್ದಾರೆ ಮತ್ತು ಅವರು ಸಹ ತಪ್ಪೊಪ್ಪಿಕೊಂಡಿದ್ದಾರೆ ಎಸ್ ಎಸ್ ಪಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಬರೆದ ಭಾರತ: ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ಮಹಿಳಾ ಪಡೆ; ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ

Bengaluru tunnel project: ಟ್ರಾಫಿಕ್ ಸಮಸ್ಯೆ ಹೋಗಲಾಡಿಸುವ ಯೋಜನೆಗೆ ವಿರೋಧವೇಕೆ? ಸಿಎಂ ಸಿದ್ದರಾಮಯ್ಯ

ನನ್ನ ಮೇಲೆ ಒತ್ತಡ ಹೇರಲು ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಲಾಗಿತ್ತು : ನಿವೃತ್ತ ಸಿಜೆಐ ಸ್ಫೋಟಕ ಹೇಳಿಕೆ; ಮಾಜಿ CJI ಆರೋಪ ಯಾರ ವಿರುದ್ಧ?

ಫಲೋಡಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 18 ಯಾತ್ರಾರ್ಥಿಗಳ ಸಾವು!

News healines 02-11-2025| ಟನಲ್ ರಸ್ತೆ: ಟನಲ್ ರಸ್ತೆ: ಅಶೋಕ್ ನೇತೃತ್ವದಲ್ಲಿ ಸಮಿತಿಗೆ ಸಿದ್ಧ-DCM; ಮದರಸಾ ಉರ್ದು ಶಾಲೆಗಳಲ್ಲಿ ಕನ್ನಡ ಕಡ್ಡಾಯ- ಜಮೀರ್ ಅಹ್ಮದ್ ಖಾನ್

SCROLL FOR NEXT