ಪಣಜಿ: ಹಲವು ದಿನಗಳ ಚಿಕಿತ್ಸೆ ಬಳಿಗೆ ತಾಯ್ನಾಡಿಗೆ ಮರಳಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್ ಇಂದು ಬೆಳಗ್ಗೆ ಹಲವು ದೇವಾಲಯಗಳಿಗೆ ತೆರಳಿ ಆಶೀರ್ವಾದ ಪಡೆದಿದ್ದಾರೆ.
ಮೊದಲಿಗೆ ಪರಿಕ್ಕರ್ ಉತ್ತರ ಗೋವಾದಿಂದ 15 ಕಿಮೀ ದೂರದಲ್ಲಿರುವ ಖಂಡೋಲಾ ಗ್ರಾಮದಲ್ಲಿರುವ ದೇವಕಿ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ದೇವಕಿ ಕೃಷ್ಣ ಪರಿಕ್ಕರ್ ಮನೆ ದೇವರಾಗಿದೆ, ನಂತರ ಪಣಜಿಗೆ ವಾಪಸಾದ ಪರಿಕ್ಕರ್ ಮಹಾಲಕ್ಷ್ಮಿ ದೇವಾಲಯದಲ್ಲಿ ದೇವಿ ದರ್ಶನ ಪಡೆದರು ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ತಿಳಿಸಿದೆ.
ದೇವರ ದರ್ಶನದ ನಂತರ ತಮ್ಮ ಕಚೇರಿಗೆ ತೆರಳಿದ ಪರಿಕ್ಕರ್ ರಾಜ್ಯ ಕಾರ್ಯಾಲಯಕ್ಕೆ ಬಂದು ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಮೂರಕು ತಿಂಗಳ ಚಿಕಿತ್ಸೆ ನಂತರ ನಿನ್ನೆ ಸಂಜೆ 62 ವರ್ಷದ ಪರಿಕ್ಕರ್ ಗೋವಾಗೆ ಮರಳಿದ್ದಾರೆ, ಮಾರ್ಚ್ 7 ರಂದು ಯು ಎಸ್ ಗೆ ತೆರಳಿದ್ದರು.