ಶ್ರೀನಗರ: ಭಾರತದ ಗಡಿ ನುಸುಳಲು ಯತ್ನ ನಡೆಸುತ್ತಿದ್ದ ಇಬ್ಬರು ಪಾಕಿಸ್ತಾನ ಪ್ರಜೆಗಳನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಬಂಧನಕ್ಕೊಳಪಡಿಸಿರುವುದಾಗಿ ಶನಿವಾರ ಹೇಳಿದೆ.
ಬಂಧಿತರನ್ನು ನರ್ವಾಲ್ ಜಿಲ್ಲೆಯ ಸೊಹೈಲ್ ಕುಮಾರ್ ಮತ್ತು ಸಿಯಾಲ್ಕೋಟ್'ನ ಝಫರ್ವಾಲ್ ತೆಹ್ಸಿಲ್ ನಿವಾಸಿಯಾಗಿರುವ ಅಹ್ಮದ್ ಎಂಬಾತನನ್ನು ಬಂಧನಕ್ಕೊಳಪಡಿಸಿರುವುದಾಗಿ ಬಿಎಸ್ಎಫ್ ಮಾಹಿತಿ ನೀಡಿದೆ.
ಭಾರತ ಗಡಿ ನುಸುಳಲು ಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿ ಇಬ್ಬರನ್ನೂ ಶುಕ್ರವಾರ ಸಂಜೆ ಬಂಧನಕ್ಕೊಳಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.