ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಲೆಪ್ಟಿನೆಂಟ್ ಗೌರ್ನರ್ ಅನಿಲ್ ಬೈಜಲ್ ನಡುವಿನ ಬಿಕ್ಕಟ್ಟು ತೀವ್ರಗೊಂಡಿರುವ ಬೆನ್ನಲ್ಲೇ ಕೇಜ್ರಿವಾಲ್ ಒಣಪ್ರತಿಷ್ಠೆಯಿಂದಾಗಿ ದೆಹಲಿ ಜನತೆ ತೊಂದರೆ ಅನುಭವಿಸುವಂತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಬಳಿ ಕೇಜ್ರಿವಾಲ್ ವಿಷಾಧ ವ್ಯಕ್ತಪಡಿಸುವ ಮೂಲಕ ಕೇಜ್ರಿವಾಲ್ ಈ ಪ್ರಸಂಗಕ್ಕೆ ತೆರೆ ಎಳೆಯಬೇಕಾಗಿದೆ ಎಂದು ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ಮಾಕೆನ್ ಒತ್ತಾಯಿಸಿದ್ದಾರೆ.ಕೇಜ್ರಿವಾಲ್ ಅವರ ನಿವಾಸದಲ್ಲಿ ಫೆಬ್ರವರಿ 19 ರಂದು ಅಂಶು ಪ್ರಕಾಶ್ ಮೇಲೆ ಎಎಪಿ ಶಾಸಕರಿಂದ ಹಲ್ಲೆ ಆರೋಪ ಕೇಳಿಬಂದಿತ್ತು.
2014ರಲ್ಲಿ 49 ದಿನಗಳ ಸರ್ಕಾರದ ನಂತರ ಕೇಜ್ರಿವಾಲ್ ರೇಡಿಯೊ ಜಾಹಿರಾತು ಸಂಬಂಧ ಕ್ಷಮೆ ಕೇಳಿರಲಿಲ್ಲವೇ, ಕಪಿಲ್ ಸಿಬಲ್, ಅರುಣ್ ಜೇಟ್ಲಿ, ಮಾಜಿಥೈ ಅವರ ಕ್ಷಮೆ ಯಾಚಿಸಿರುವ ಕೇಜ್ರಿವಾಲ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಳಿ ಕ್ಷಮೆ ಕೇಳುತ್ತಿಲ್ಲ, ಕೇಜ್ರಿವಾಲ್ ಪ್ರತಿಷ್ಠೆಯಿಂದ ದೆಹಲಿ ಜನತೆ ಏಕೆ ತೊಂದರೆ ಅನುಭವಿಸಬೇಕು ಎಂದು ಮಾಕೆನ್ ಆಗ್ರಹಿಸಿದ್ದಾರೆ.