ಪ್ರಕಾಶ್ ಜಾವಡೇಕರ್ 
ದೇಶ

ಸಿಟಿಇಟಿ ಪರೀಕ್ಷೆಗೆ ತ್ರಿ-ಭಾಷಾ ಸೂತ್ರ ರದ್ದು, ಪ್ರಾದೇಶಿಕ ಭಾಷೆ ಆಯ್ಕೆಗೆ ಅವಕಾಶ: ಜಾವಡೇಕರ್

ಕೇಂದ್ರ ಸರ್ಕಾರದ ಅಧೀನದ ಶಾಲೆಗಳಲ್ಲಿ 1 ರಿಂದ 8ನೇ ತರಗತಿ ಶಿಕ್ಷಕರಾಗಿ ನೇಮಕವಾಗಲು ಸಿಟಿಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಿದ್ದು...

ನವದೆಹಲಿ: ಕೇಂದ್ರ ಸರ್ಕಾರದ ಅಧೀನದ ಶಾಲೆಗಳಲ್ಲಿ 1 ರಿಂದ 8ನೇ ತರಗತಿ ಶಿಕ್ಷಕರಾಗಿ ನೇಮಕವಾಗಲು ಸಿಟಿಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಿದ್ದು ಶಿಕ್ಷಕರಾಗುವವರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ತ್ರಿ-ಭಾಷಾ ಸೂತ್ರವನ್ನು ರದ್ದು ಮಾಡಿದ್ದು ಇನ್ನು ಪ್ರಾದೇಶಕ ಭಾಷೆಯಲ್ಲೇ ಪರೀಕ್ಷೆಗಳನ್ನು ಬರೆಯಬಹುದಾಗಿದೆ. 
ಮೊದಲಿಗೆ ಭಾರತದ 20 ಭಾಷೆಗಳಲ್ಲೂ ಸಿಟಿಇಟಿ ಪರೀಕ್ಷಾರ್ಥ ಪರೀಕ್ಷೆಯನ್ನು ನಡೆಸಿತ್ತು. ನಂತರ ಪ್ರಾದೇಶಿಕ ಭಾಷೆಗಳಾದ ಕನ್ನಡ, ತಮಿಳು, ಮಲಯಾಳಂ, ತೆಲುಗು, ಗುಜರಾತ್ ಮತ್ತು ಬೆಂಗಾಳಿ ಸೇರಿದಂತೆ 17 ಭಾಷೆಗಳನ್ನು ಹೊರತುಪಡಿಸಿ ಬರೀ ಮೂರೇ ಭಾಷೆಯಲ್ಲಿ ಪರೀಕ್ಷೆಯನ್ನು ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕಾರ್ ಅಭ್ಯರ್ಥಿಗಳು ಆಯಾ ಪ್ರಾದೇಶಿಕ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಕಾಶ್ ಜಾವಡೇಕರ್ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಸಿಟಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. 
ಸಿಟಿಇಟಿ ಪರೀಕ್ಷೆಯನ್ನು 2018ರ ಸೆಪ್ಟೆಂಬರ್ 16ರಂದು ನಡೆಯಲಾಗುತ್ತದೆ. ಪತ್ರಿಕೆ 1 ಮಧ್ಯಾಹ್ನ 2ರಿಂದ 4.30ರವರೆಗೆ. ಪತ್ರಿಕೆ 2 ಬೆಳಗ್ಗೆ 9.30ರಿಂದ 12ರವರೆಗೆ ನಡೆಸಲಾಗುತ್ತದೆ. ಎರಡು ವಿಭಾಗದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. 1ರಿಂದ 5ನೇ ತರಗತಿ ಶಿಕ್ಷಕರಾಗಲು ಪತ್ರಿಕೆ 1 ಹಾಗೂ 6ರಿಂದ 8ನೇ ತರಗತಿಗೆ ಶಿಕ್ಷಕರಾಗುವವರು ಪತ್ರಿಕೆ 2ನ್ನು ಬರೆಯಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ದುಬೈ ಏರ್‌ಪೋರ್ಟ್‌ ಬಳಿ ಡ್ರೋನ್‌ ದಾಳಿ; ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ, 'Hormuz' ರಕ್ಷಣೆಗೆ NATO ನೆರವು ಕೋರಿದ ಟ್ರಂಪ್

ಹಾರ್ಮುಜ್ ನಿಂದ ದೇಶಕ್ಕೆ ತೈಲ ಹಡಗುಗಳ ಸುಗಮ ಸಂಚಾರ: ಇರಾನ್ ನ ಭಾರತ ಒಪ್ಪಿಸಿದ್ದು ಹೇಗೆ?: ಜೈಶಂಕರ್ ಬಿಚ್ಚಿಟ್ಟ ಮಾಹಿತಿ ಇದು...

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಭಾರೀ ಅಗ್ನಿ ಅವಘಡ: ಕನಿಷ್ಠ 10 ಮಂದಿ ಸಾವು, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ

ಗಡುವು ಮೀರಿ 5 ತಿಂಗಳಾದರೂ ಮುಕ್ತಾಯಗೊಳ್ಳದ ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನವೀಕರಣ ಕಾಮಗಾರಿ!

ರಾಜ್ಯಸಭೆಗೆ 26 ಮಂದಿ ಅವಿರೋಧ ಆಯ್ಕೆ: 3ರಾಜ್ಯಗಳಲ್ಲಿ ಬಿಗ್ ಫೈಟ್; ಮೇಲ್ಮನೆಯಲ್ಲಿ ಬಿಜೆಪಿಗೆ ಮತ್ತಷ್ಟು ಬಲ!

SCROLL FOR NEXT