ಮುಂಬೈ: ಜಮ್ಮು ಮತ್ತು ಕಾಶ್ಮೀರದಲ್ಲಿ ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ(ಪಿಡಿಪಿ) ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಕಾಂಗ್ರೆಸ್ ಸ್ಪಷ್ಟವಾಗಿ ತಳ್ಳಿಹಾಕಿಗೆ.
ಕಾಶ್ಮೀರದಲ್ಲಿ ಬಿಜೆಪಿ, ಪಿಡಿಪಿ ಜೊತೆಗಿನ ಮೈತ್ರಿ ಮುರಿದುಕೊಂಡ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಬಿಜೆಪಿ ಕಣಿವೆ ರಾಜ್ಯದ ಸ್ಥಿತಿ ಉಲ್ಬಣಗೊಳಿಸಿದ ನಂತರ ಪಿಡಿಪಿ ಜತೆ ಮೈತ್ರಿ ಮುರಿದುಕೊಂಡಿದೆ ಎಂದು ಆರೋಪಿಸಿದ್ದಾರೆ.
'ಈಗ ಏನಾಗಿದೆಯೇ ಅದು ಒಳ್ಳೆಯದ್ದೆ ಆಗಿದೆ. ಪಿಡಿಪಿ-ಬಿಜೆಪಿ ಸರ್ಕಾರ ಪತನದಿಂದ ಜಮ್ಮು ಮತ್ತು ಕಾಶ್ಮೀರ ಜನತೆ ನಿಟ್ಟೂಸಿರು ಬಿಡುವಂತಾಗಿದೆ. ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚು ನಾಗರಿಕರು ಮತ್ತು ಯೋಧರು ಮೃತಪಟ್ಟಿದ್ದಾರೆ' ಎಂದರು.
ಇದೇ ವೇಳೆ, ಪಿಡಿಪಿ ಜತೆ ಮೈತ್ರಿ ಪ್ರಶ್ನೆಯೇ ಬರುವುದಿಲ್ಲ ಎಂದು ಗುಲಾಂ ನಬಿ ಆಜಾದ್ ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಸಹ ಪಿಡಿಪಿ ಜೊತೆ ಮೈತ್ರಿ ಮುರಿದುಕೊಂಡ ಬಿಜೆಪಿ ನಿರ್ಧಾರವನ್ನು ಸ್ವಾಗತಿಸಿದೆ.