ನವದೆಹಲಿ: ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ಅರವಿಂದ್ ಸುಬ್ರಹ್ಮಣಿಯನ್ ಅಕ್ಟೋಬರ್ ತಿಂಗಳಲ್ಲಿ ಅಮೆರಿಕಾಗೆ ವಾಪಸ್ ತೆರಳಲಿದ್ದಾರೆ.
ಕೌಟುಂಬಿಕ ಕಾರಣಗಳಿಂದಾಗಿ ಅಮೆರಿಕಾಕ್ಕೆ ವಾಪಸ್ ತೆರಳಲು ಅರವಿಂದ್ ಸುಬ್ರಹ್ಮಣಿಯನ್ ನಿರ್ಧರಿಸಿದ್ದಾರೆ ಎಂದು ಫೇಸ್ ಬುಕ್ ಪೋಸ್ಟ್ ಮೂಲಕ ಕೇಂದ್ರ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
2014 ರಲ್ಲಿ ರಘುರಾಮ್ ರಾಜನ್ ಆರ್ ಬಿಐ ಗೌರ್ನರ್ ಆದ ನಂತರ ಮುಖ್ಯ ಆರ್ಥಿಕ ಸಲಹೆಗಾರರ ಹುದ್ದೆಗೆ ಅರವಿಂದ್ ಸುಬ್ರಹ್ಮಣಿಯನ್ ನೇಮಕಗೊಂಡಿದ್ದರು. ಕೆಲವು ದಿನಗಳ ಹಿಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅರವಿಂದ್ ನನ್ನೊಂದಿಗೆ ಮಾತನಾಡಿದ್ದ ಸುಬ್ರಹ್ಮಣಿಯನ್, ಕೌಟುಂಬಿಕ ಕಾರಣಗಳಿಂದಾಗಿ ಅಮೆರಿಕಾಗೆ ಹೋಗುವುದು ಅನಿವಾರ್ಯವಾಗಿದ್ದು, ನಾನು ಅವರ ನಿರ್ಧಾರವನ್ನು ಒಪ್ಪಲೇಬೇಕಾಯಿತು ಎಂದು ಜೇಟ್ಲಿ ತಿಳಿಸಿದ್ದಾರೆ.
2014 ರ ಅಕ್ಟೋಬರ್ 16 ರಂದು ಅರವಿಂದ್ ಸುಬ್ರಹ್ಮಣಿಯನ್ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡಿದ್ದರು. ಮೂರು ವರ್ಷಗಳ ಅವಧಿ ಪೂರ್ಣಗೊಂಡ ನಂತರವೂ ಅವರನ್ನು ಮುಂದುವರೆಯುವಂತೆ ಮನವಿ ಮಾಡಿದ್ದೆ. ಆಗಲೇ ಅವರು ತಮಗೆ ಕೌಟುಂಬಿಕ ಅನಿವಾರ್ಯತೆಗಳಿದೆ ಎಂದು ಹೇಳಿದ್ದರು. ಈಗ ಅಮೆರಿಕಾಗೆ ತೆರಳುವುದು ಅನಿವಾರ್ಯವಾಗಿದ್ದು, ಅಕ್ಟೋಬರ್ ನಲ್ಲಿ ಅಮೆರಿಕಾಗೆ ವಾಪಸ್ ತೆರಳಲಿದ್ದಾರೆ ಎಂದು ಜೇಟ್ಲಿ ತಿಳಿಸಿದ್ದು ಅರವಿಂದ್ ಸುಬ್ರಹ್ಮಣಿಯನ್ ಅವರಿಗೆ ಶುಭ ಹಾರೈಸಿದ್ದಾರೆ.