ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮಹಾರಾಷ್ಟ್ರದಲ್ಲಿ ದ್ವಿಚಕ್ರ ಆಂಬುಲೆನ್ಸ್ ಯೋಜನೆಗೆ ಶೀಘ್ರವೇ ಚಾಲನೆ

ಮಹಾರಾಷ್ಟ್ರದಲ್ಲಿ ದ್ವಿಚಕ್ರ ಆಂಬುಲೆನ್ಸ್ ಸೇವೆ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಶೀಘ್ರವೇ ಪೂರ್ಣಪ್ರಮಾಣದಲ್ಲಿ ಜಾರಿಯಾಗುವ ಸಾಧ್ಯತೆ ಇದೆ.

ಮಹಾರಾಷ್ಟ್ರದಲ್ಲಿ ದ್ವಿಚಕ್ರ ಆಂಬುಲೆನ್ಸ್ ಯೋಜನೆಗೆ ಶೀಘ್ರವೇ ಚಾಲನೆ
Srinivas Rao BV
Updated On : 21 Jun 2018, 9:06 am
ಮುಂಬೈ: ಮಹಾರಾಷ್ಟ್ರದಲ್ಲಿ ದ್ವಿಚಕ್ರ ಆಂಬುಲೆನ್ಸ್ ಸೇವೆ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಶೀಘ್ರವೇ ಪೂರ್ಣಪ್ರಮಾಣದಲ್ಲಿ ಜಾರಿಯಾಗುವ ಸಾಧ್ಯತೆ ಇದೆ. 
ಹಿರಿಯನಾಗರಿಕರಿಗೆ ಸಹಕಾರಿಯಾಗಿರಬೇಕೆಂಬ ಉದ್ದೇಶದಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಹೊಂದಿರುವ ದ್ವಿಚಕ್ರ ವಾಹನಗಳು ಆಂಬುಲೆನ್ಸ್ ಸೇವೆಗೆ ಬಳಕೆ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯೋಜನೆಯನ್ನು ಪ್ರಾಯೋಗಿಕವಾಗಿ ಮುಂಬೈ ನಲ್ಲಿ ಶೀಘ್ರವೇ ಪ್ರಾರಂಭಿಸುತ್ತೇವೆ, ದ್ವಿಚಕ್ರ ಆಂಬುಲೆನ್ಸ್ ಸಿಬ್ಬಂದಿಗಳು ಒಂಟಿಯಾಗಿರುವ ಹಿರಿಯ ನಾಗರಿಕರೊಂದಿಗೆ ಈ ಸೇವೆಯ ಕುರಿತು ಮಾತನಾಡಿ ಮಾಹಿತಿ ನೀಡಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

Advertisement

Advertisement

ಮುಂಬೈ ನಲ್ಲಿ ಪ್ರಸ್ತುತ 20 ಬೈಕ್ ಗಳು ಕಾರ್ಯನಿರ್ವಹಿಸುತ್ತಿದ್ದು, ಪಾಲ್ಘರ್ ಮತ್ತು ಮೆಲ್ಘಾಟ್ ಗೂ ವಿಸ್ತರಣೆ ಮಾಡಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ತ್ ನಲ್ಲಿ ಲೋಕಾರ್ಪಣೆಗೊಳಿಸಿದ್ದ ಸೇವೆಗೆ ಈ ವರೆಗೂ 1,500 ಕರೆಗಳು ಬಂದಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement