ಕಾಂಗ್ರೆಸ್ ನಾಯಕ ಮತ್ತು ಕೇಂದ್ರ ಮಾಜಿ ಸಚಿವ ಸೈಫುದ್ದೀನ್ ಸೋಜ್ 
ದೇಶ

ಕಾಶ್ಮೀರ ಕುರಿತ ಮುಷರಫ್ ಹೇಳಿಕೆಗೆ ಸಮರ್ಥನೆ; ಪಾಕ್'ಗೆ ತೆರಳಲು ಸೈಫುದ್ದೀನ್'ಗೆ 'ಒನ್ ವೇ ಟಿಕೆಟ್' ಆಫರ್ ನೀಡಿದ ಬಿಜೆಪಿ

ಕಾಶ್ಮೀರ ವಿವಾದ ಕುರಿತಂತೆ ಪಾಕಿಸ್ತಾನ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಮಾಜಿ ಸಚಿವ ಸೈಫುದ್ದೀನ್ ಸೋಜ್ ಅವರಿಗೆ ಪಾಕಿಸ್ತಾನಕ್ಕೆ ತೆರಳಲು ಬಿಜೆಪಿ 'ಒನ್ ವೇ ಟಿಕೆಟ್' ಆಫರ್ ನೀಡಿದೆ...

ನವದೆಹಲಿ: ಕಾಶ್ಮೀರ ವಿವಾದ ಕುರಿತಂತೆ ಪಾಕಿಸ್ತಾನ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಕಾಂಗ್ರೆಸ್ ನಾಯಕ ಮತ್ತು ಕೇಂದ್ರ ಮಾಜಿ ಸಚಿವ ಸೈಫುದ್ದೀನ್ ಸೋಜ್ ಅವರಿಗೆ ಪಾಕಿಸ್ತಾನಕ್ಕೆ ತೆರಳಲು ಬಿಜೆಪಿ 'ಒನ್ ವೇ ಟಿಕೆಟ್' ಆಫರ್ ನೀಡಿದೆ. 
ಸೈಫುದ್ದೀನ್ ಸೋಜ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು, ಭಾರತದಲ್ಲಿ ಇರಲು ಯಾರೇ ಇಚ್ಚಿಸಿದರೂ, ಸಂವಿಧಾನಕ್ಕೆ ತಲೆಬಾಗಲೇಬೇಕು. ಒಂದು ವೇಳೆ ಮುಷರಪ್ ಅವರನ್ನು ಇಷ್ಟ ಪಡುವುದಾದರೆ, ಅವರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಹೇಳಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದಲ್ಲಿ ಎಡಪಂಥೀಯರಿಂದ ತಮ್ಮ ಪುತ್ರಿ ಅಪಹರಣಕ್ಕೀಡಾಗಿದ್ದಾಗ ಅಂದು ಸಚಿವರಾಗಿದ್ದ ಸೈಫುದ್ದೀನ್ ಅವರು ಕೇಂದ್ರದ ಶಕ್ತಿ ಹಾಗೂ ಸಚಿವ ಸ್ಥಾನ ಅವರಿಗೆ ಲಾಭವಾಗಿತ್ತು. ಇಂತಹ ಜನರಿಗೆ ಸಹಾಯ ಮಾಡಿದ್ದರಿಂದ ಯಾವುದೇ ಸಹಾಯವಾಗಿಲ್ಲ. ನಮ್ಮ ದೇಶದಲ್ಲಿ ಇರಲು ಬಯಸುವವರು ಇಲ್ಲಿನ ಸಂವಿಧಾನಕ್ಕೆ ತಲೆ ಬಾಗಬೇಕು. ಒಂದು ವೇಳೆ ಮುಷರಫ್ ಅವರನ್ನು ಇಷ್ಟಪಡುವುದಾದರೆ, ಅವರಿಗೆ ಪಾಕಿಸ್ತಾನಕ್ಕೆ ತೆರಳಲು ಒನ್ ವೇ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 
ಇದರಂತೆ ಬಿಜೆಪಿ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಸೈಫುದ್ದೀನ್ ಸೋಜ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 
ಪ್ರತ್ಯೇಕತಾವಾದಿಗಳು ಮತ್ತು ಉಗ್ರರಿ ನೈತಿಕ ಸ್ಥೈರ್ಯ ಹೆಚ್ಚಿಸುವಂತ ಹೇಳಿಕೆಯನ್ನು ಯಾರೇ ಆದರೂ ನೀಡಬಾರದು. ಕಾಶ್ಮೀರ ವಿವಾದ ಅತ್ಯಂತ ಗಂಭೀರ ವಿಚಾರ. ರಾಜ್ಯದ ಶಾಂತಿ, ಅಭಿವೃದ್ಧಿ ಹಾಗೂ ಬೆಳವಣಿಗೆಯನ್ನು ಪ್ರತ್ಯೇಕತಾವಾದಿಗಳು ಹಾಗೂ ಉಗ್ರರು ಹೈಜಾಕ್ ಮಾಡಿದ್ದಾರೆ. ಇಂತಹ ಶಕ್ತಿಗಳನ್ನು ವಿಫಲಗೊಳ್ಳುವಂತೆ ಮಾಡಲು ನಾವೆಲ್ಲರೂ ಒಗ್ಗೂಡಿ ಮುಂದಕ್ಕೆ ಬರಬೇಕು. ಪ್ರತ್ಯೇಕತಾವಾದಿಗಳು ಹಾಗೂ ಉಗ್ರರ ನೈತಿಕ ಸ್ಥೈರ್ಯ ಹೆಚ್ಚಿಸುವ ಹೇಳಿಕೆಗಳನ್ನು ಯಾರೇ ಆದರೂ ನೀಡಬಾರದು ಎಂದು ತಿಳಿಸಿದ್ದಾರೆ. 
ಇದರಂತೆ ಶಿವಸೇನೆ ಕೂಡ ಹೇಳಿಕೆಯನ್ನು ಖಂಡಿಸಿದ್ದು, ಸೈಫುದ್ದೀನ್ ಅವರ ಹೇಳಿಕೆ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದೆ. 
ತಮ್ಮ ಪಕ್ಷದ ನಾಯಕರೊಬ್ಬರು ನೀಡಿರುವ ಕುರಿತಂತೆ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕು. ಸೈಫುದ್ದೀನ್ ಅವರಿಗೆ ಪಾಕಿಸ್ತಾನದ ಮೇಲೆ ಹಾಗೂ ಮುಷರಫ್ ಅವರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ಅವರು ಪಾಕಿಸ್ತಾನಕ್ಕೆ ವಲಸೆ ಹೋಗಲಿ. ಅವರ ಸೇವಕರಾಗಿರಲಿ ಎಂದು ಶಿವಸೇನೆ ನಾಯಕ ಮನೀಶ್ ಕಯಾಂಡೆಯವರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

SCROLL FOR NEXT