ವಡೋದರ ಶಾಲೆಯಲ್ಲಿ ಹತ್ಯೆ: 10 ನೇ ತರಗತಿಯ ವಿದ್ಯಾರ್ಥಿ ಬಂಧನ 
ದೇಶ

ವಡೋದರ ಶಾಲೆಯಲ್ಲಿ ಬಾಲಕನ ಹತ್ಯೆ: 10ನೇ ತರಗತಿಯ ವಿದ್ಯಾರ್ಥಿ ಬಂಧನ

ವಡೋದರಾದ ಶಾಲೆಯಲ್ಲಿನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದ 9 ನೇ ತರಗತಿ ವಿದ್ಯಾರ್ಥಿಯ ಹತ್ಯೆ ಪ್ರಕರಣದಲ್ಲಿ 10 ನೇ ತರಗತಿಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಡೋದರಾ: ವಡೋದರಾದ ಶಾಲೆಯಲ್ಲಿನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದ 9 ನೇ ತರಗತಿ ವಿದ್ಯಾರ್ಥಿಯ ಹತ್ಯೆ ಪ್ರಕರಣದಲ್ಲಿ 10 ನೇ ತರಗತಿಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. 
ಹತ್ಯೆ ನಡೆದ ಸ್ಥಳದಲ್ಲಿ 12 ಇಂಚ್ ನ ಚೂರಿ ಪತ್ತೆಯಾಗಿತ್ತು. ಇದಕ್ಕೆ ಪೂರಕವಾಗಿ ಶಾಲೆಯ ಬಳಿ ಇದ್ದ ದೇವಾಲಯದ ಮಾಳಿಗೆಯಲ್ಲಿ ಸಿಕ್ಕಿದ್ದ ಆರೋಪಿಯ ಬ್ಯಾಗ್ ನಲ್ಲಿ 3 ದೊಡ್ಡ ಚೂರಿಗಳಿದ್ದವು. ಅಷ್ಟೇ ಅಲ್ಲದೇ ಮೆಣಸಿನ ಪುಡಿಯೂ ಇತ್ತು. 
ಬರಾನ್ಪೋರಾ ಪ್ರದೇಶದಲ್ಲಿದ್ದ ಭಾರ್ತಿ ಶಾಲೆಯ ಮೃತ ವಿದ್ಯಾರ್ಥಿಗೂ ಆರೋಪಿಯ ನಡುವೆ ಹಿಂದೊಮ್ಮೆ ವಾಗ್ವಾದ ನಡೆದಿತ್ತು. ಆದರೆ ಯಾವ ವಿಷಯಕ್ಕೆ ವಾಗ್ವಾದ ನಡೆದಿತ್ತು ಎಂಬುದನ್ನು ಪೊಲೀಸರು ಇನ್ನಷ್ಟೇ ತಿಳಿದುಕೊಳ್ಳಬೇಕಾಗಿದೆ. 
ಹತ್ಯೆಗೀಡಾಗಿದ್ದ ಬಾಲಕ ಕೇವಲ ಒಂದು ವಾರದ ಹಿಂದಷ್ಟೇ ಆ ಶಾಲೆಗೆ ಸೇರಿದ್ದ, ಆತನ ಪೋಷಕರು ಗುಜರಾತ್ ನ ಆನಂದ್ ನಲ್ಲಿದ್ದರೆ ಈ ವಿದ್ಯಾರ್ಥಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!