ನವದೆಹಲಿ: ಅಪರಾಧ ಪ್ರಕರಣಗಳ ಭೇದಿಸಲು ಪೊಲೀಸರೊಂದಿಗೆ ಆಧಾರ್ ದತ್ತಾಂಶ ವಿನಿಮಯ ಮಾಡುವ ಕುರಿತು ಕೇಂದ್ರ ಸರ್ಕಾರ ಚಿಂತನೆಯಲ್ಲಿ ತೊಡಗಿದೆ ಎಂದ ಹೇಳಿಕೆ ಬೆನ್ನಲ್ಲೇ ಅಪರಾಧ ಪ್ರಕರಣ ಸಂಬಂಧ ಆಧಾರ್ ದತ್ತಾಂಶ ಹಂಚಿಕೆ ಸಾಧ್ಯವಿಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.
ಇತ್ತೀಚೆಗಷ್ಟೇ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರು, ವ್ಯಕ್ತಿ ಮೊದಲ ಬಾರಿಗೆ ಭಾಗಿಯಾದ ಪ್ರಕರಣವನ್ನು ಭೇದಿಸಲು ಹಾಗೂ ಅನಾಥ ಶವಗಳನ್ನು ಗುರುತಿಸುವ ಉದ್ದೇಶದಿಂದ ಆಧಾರ್ ದತ್ತಾಂಶವನ್ನು ಪೊಲೀಸರೊಂದಿಗೆ ಹಂಚಿಕೊಳ್ಳುವ ಮನವಿಯನ್ನು ಕೇಂದ್ರ ಸರಕಾರ ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.
ಇದರ ಬೆನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಯುಐಡಿಎಐ ಅಪರಾಧ ಪ್ರಕರಣ ತನಿಖೆಗಾಗಿ ಆಧಾರ್ ದತ್ತಾಂಶ ಹಂಚಿಕೆ ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅಂತೆಯೇ ಯಾವುದೇ ಕಾರಣಕ್ಕೂ ಯಾವುದೇ ರೀತಿಯ ತನಿಖಾ ಸಂಸ್ಥೆಗಳೊಂದಿಗೂ ಆಧಾರ್ ದತ್ತಾಂಶ ಹಂಚಿಕೆ ಸಾಧ್ಯವಿಲ್ಲ. ಇದು ಆಧಾರ್ ದತ್ತಾಂಶ ಭದ್ರತಾ ನೀತಿಗೆ ವಿರುದ್ಧವಾದದ್ದು ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.
'ಅಪರಾಧ ಪ್ರಕರಣಗಳ ತನಿಖೆಗಾಗಿ ಆಧಾರ್ ದತ್ತಾಂಶ ಬಳಕೆ ನಿಷಿದ್ಧ. ಇದು ಆಧಾರ್ ಭದ್ರತಾ ಕಾನೂನು 20169ರ ಸೆಕ್ಷನ್ 29ರ ಉಲ್ಲಂಘನೆಯಾಗುತ್ತದೆ ಎಂದು ಆಧಾರ್ ನಿರ್ದೇಶಕ ಇಷ್ ಕುಮಾರ್ ಅವರು ಹೇಳಿದ್ದಾರೆ.
ಇನ್ನು ಗುರುವಾರ ಹೈದರಾಬಾದ್‌ನಲ್ಲಿ ನಡೆದ ಬೆರಳಚ್ಚು ಬ್ಯೂರೊದ ನಿರ್ದೇಶಕರ 19ನೇ ಅಖಿಲ ಭಾರತ ಸಮಾವೇಶದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಅಹಿರ್ ಅವರು, ಆಧಾರ್ ಮಾಹಿತಿಗಳ ಹಂಚಿಕೆಗೆ ಅವಕಾಶ ಹಾಗೂ ಕೈದಿಗಳ ಗುರುತು ಕಾಯ್ದೆಗೆ ತಿದ್ದುಪಡಿ ಸಲಹೆ ಬಗ್ಗೆ ಸಚಿವಾಲಯದಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದರು. ಪ್ರಮುಖ ಉದ್ದೇಶಗಳಿಗಾಗಿ ಪೊಲೀಸರಿಗೆ ಅಗತ್ಯ ಇರುವ ಆಧಾರ್ ದತ್ತಾಂಶದ ಸೀಮಿತ ಲಭ್ಯತೆ ಇರಬೇಕು ಎಂದು ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯುರೊದ ನಿರ್ದೇಶಕ ಇಶಾ ಕುಮಾರ್ ಅವರ ನೀಡಿದ ನಿರ್ದಿಷ್ಟ ಸಲಹೆಗೆ ಸಚಿವರು ಈ ಪ್ರತಿಕ್ರಿಯೆ ನೀಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos