ದೇಶ

ಹವಾನಿಯಂತ್ರಕದ ತಾಪಮಾನ 24 ಡಿಗ್ರಿ ನಿಗದಿಗೆ ಇಂಧನ ಸಚಿವಾಲಯದ ಸಲಹೆ

Srinivas Rao BV
ನವದೆಹಲಿ: ಹವಾನಿಯಂತ್ರಕದ ತಾಪಮಾನವನ್ನು 24 ಡಿಗ್ರಿಗೆ ನಿಗದಿಪಡಿಸಲು ಇಂಧನ ಸಚಿವಾಲಯ ಉತ್ಪಾದಕ ಸಂಸ್ಥೆಗಳಿಗೆ ಸಲಹೆ ನೀಡಿದೆ. 
ಮುಂದಿನ ದಶಕಗಳಲ್ಲಿ ಇಂಧನ ಪೂರೈಕೆಗೆ ಹೆಚ್ಚು ಬೇಡಿಕೆ ಉಂಟಾಗಲಿದ್ದು, ಇಂಧನ ಕ್ಷಮತೆಯನ್ನು ಉತ್ತೇಜಿಸಲು ಹಾಗೂ ಗ್ರೀನ್  ಹೌಸ್ ಗ್ಯಾಸ್ ಎಮಿಷನ್ ನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ಇಂಧನ ಸಚಿವಾಲಯ ಮುಂದಾಗಿದೆ. 
ಡೀಫಾಲ್ಟ್ ತಾಪಮಾನವನ್ನು 24 ಡಿಗ್ರಿ ಸೆಲ್ಸಿಯಸ್ ಗೆ ಇಳಿಸುವುದು ಕಡ್ಡಾಯವಾಗುವ ಸಾಧ್ಯತೆಗಳೂ ಇದೆ ಎಂದು ಇಂಧನ ಸಚಿವಾಲಯದ ಹೇಳಿಕೆ ಮೂಲಕ ತಿಳಿದುಬಂದಿದೆ. 
ಇಂಧನ ಸಚಿವ ಆರ್ ಕೆ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹವಾನಿಯಂತ್ರಕ ಉತ್ಪಾದಕರಿಗೆ ಈ ಅಂಶವನ್ನು ಸ್ಪಷ್ಟಪಡಿಸಲಾಗಿದ್ದು, 24 ಡಿಗ್ರಿ ತಾಪಮಾನ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಸಲಹಾಪತ್ರವನ್ನು ಕಳಿಸುವುದಕ್ಕೂ ನಿರ್ಧರಿಸಲಾಗಿದೆ. ಎಸಿಯಲ್ಲಿನ ಡೀಫಾಲ್ಟ್ ಟೆಂಪರೇಚರ್ ನ್ನು ಪ್ರತಿ ಬಾರಿ ಒಂದು ಡಿಗ್ರಿ ತಾಪಮಾನ ಏರಿಕೆ ಮಾಡಿದಾಗಲೂ ಒಟ್ಟಾರೆ ವಿದ್ಯುತ್ ಬಳಕೆಯಲ್ಲಿನ ಶೇ.6 ರಷ್ಟನ್ನು ಉಳಿತಾಯ ಮಾಡಬಹುದು ಎಂದು ಸಿಂಗ್ ಹೇಳಿದ್ದಾರೆ. 
SCROLL FOR NEXT