ಭಾರತದಲ್ಲಿ ಸುಳ್ಳು ಸುದ್ದಿಗಳು ಜನರ ಪ್ರಾಣಕ್ಕೆ ಎರವಾಗುತ್ತಿದೆ: ಬಿಬಿಸಿ ವರದಿ 
ದೇಶ

ಭಾರತದಲ್ಲಿ ಸುಳ್ಳು ಸುದ್ದಿಗಳು ಜನರ ಪ್ರಾಣಕ್ಕೆ ಎರವಾಗುತ್ತಿದೆ: ಬಿಬಿಸಿ ವರದಿ

ವಾಟ್ಸ್ ಅಪ್, ಫೇಸ್ ಬುಕ್ ನಂತಹಾ ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದುಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿ ಇಂತಹಾ ನಕಲಿ ಸುದ್ದಿಗಳು ವ್ಯಾಪಕವಾಗಿ ಹರಡುತ್ತಿದ್ದು.....

ಬೆಂಗಳೂರು: ವಾಟ್ಸ್ ಅಪ್, ಫೇಸ್ ಬುಕ್ ನಂತಹಾ ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದುಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿ ಇಂತಹಾ ನಕಲಿ ಸುದ್ದಿಗಳು ವ್ಯಾಪಕವಾಗಿ ಹರಡುತ್ತಿದ್ದು ಇದರಿಂದ ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. 
ಬಿಬಿಸಿ ಬೆಂಗಳೂರಿನ ತನಿಖಾ ತಂಡ ಈ ವರದಿ ತಯಾರಿಸಿದೆ. ಮಕ್ಕಳ ಕಳ್ಳನೆಂದು ಭಾವಿಸಿ ರಾಜಾಸ್ಥಾನದ ಕಾಲುರಾಮ್ ಎನ್ನುವಾತನನ್ನು ಜನರ ಗುಂಪೊಂದು ಥಳಿಸಿ ಹತ್ಯೆ ಮಆಡಿದ್ದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದ್ದು ವಾಟ್ಸ್ ಅಪ್, ಫೇಸ್ ಬುಕ್ ನಂತಹಾ ಸಾಮಾಜಿಕ ತಾಣಗಳು ಇಂತಹಾ ವದಂತಿ ಹರಡಲು ಕಾರಣವಾಗಿತ್ತು. ಇದೀಗ ಬ್ರಿಟೀಷ್ ಸಾರ್ವಜನಿಕ ಪ್ರಸಾರ ಸಂಸ್ಥೆ ಬಿಬಿಸಿ ವರ್ಲ್ಡ್ ನ್ಯೂಸ್ ನಲ್ಲಿ ಮಂಗಳವಾರ ಈ ಸಂಬಂಧ ವರದಿಯೊಂದನ್ನು ಪ್ರಸಾರ ಮಾಡಿದ್ದು ಇದರಲ್ಲಿ ಸುಳ್ಳು ಸುದ್ದಿ ಅಥವಾ ನಕಲಿ ಸುದ್ದಿಗಳಿಂದ ಭಾರತದಲ್ಲಿ ಆಗುತ್ತಿರುವ ಜೀವ ಹಾನಿಯ ಕುರಿತಂತೆ ವಿವರಿಸಲಾಗಿದೆ.
"ಭಾರತದಲ್ಲಿ ಇಂತಹಾ ನಕಲಿ ಸುದ್ದಿಗಳ ಕಾರಣ ಜೀವ ಹಾನಿಯ ಪ್ರಮಾಣ ಹೆಚ್ಚುತ್ತಿದೆ. ಕಾಲುರಾಮ್ ಸೇರಿದಂತೆ ಎಂಟು ಮಂದಿ ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಯ ಕಾರಣ ಜೀವ ತೆತ್ತಿದ್ದಾರೆ.ನಾವು ಸುಳ್ಳು ಸುದ್ದಿಗಳು ಒಂದು ಸವಾಲೆಂದು ಎಂದಿನಿಂದಲೂ ಹೆಳುತ್ತಾ ಬಂದಿದ್ದೇವೆ, ಆದರೆ ಭಾರತದಲ್ಲಿ ಇದು ಮಾರಣಾಂತಿಕವಾಗಿ ಪರಿಣಮಿಸಿದೆ." ಬಿಬಿಸಿ ವರದಿಯಲ್ಲಿ ಹೇಳಿದ್ದಾರೆ.
ಬಿಬಿಸಿ ಸಂಸ್ಥೆ ನಕಲಿ ಸುದ್ದಿಗಳ ಕುರಿತಂತೆ ’ಬಿಬಿಸಿ ರಿಯಾಲಿಟಿ ಚೆಕ್" ನಂತಹ ಉಪನ್ಯಾಸಗಳ  ಮೂಲಕ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ. 2016ರ್ಂದ ಪ್ರಾರಂಭವಾದ ಈ ಜಾಗೃತಿ ಕಾರ್ಯಕ್ರಮ ಟಿವಿ ಹಾಗೂ ಆನ್ ಲೈನ್ ನಲ್ಲಿ ಪ್ರಸಾರ ಕಾಣುತ್ತಿದೆ. "ನಕಲಿ ಸುದ್ದಿ ಒಂದು ದೊಡ್ಡ ಸಮಸ್ಯೆ ಮತ್ತು ಸಾಮಾನ್ಯ ಜನರಿಗೆ ಅವರು ಓದುವ, ನೋಡುವ ಸುದ್ದಿ ನಿಜವೋ, ನಕಲಿಯೋ ತಿಳಿಯುವುದಿಲ್ಲ.ಹೀಗಾಗಿ ಯಾವುದೇ ಸುದ್ದಿಯು ಸತ್ಯವೋ ಇಲ್ಲವೋ ಎನ್ನುವುದನ್ನು ತಿಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಗತ್ಯವಾಗಿದೆ" ಬಿಬಿಸಿ ಗ್ಲೋಬಲ್ ನ್ಯೂಸ್ ಲಿಮಿಟೆಡ್ ಸಿಇಒ ಜಿಮ್ ಈಗನ್ ಹೇಳಿದರು.
"ಮುಂದಿನ ವರ್ಷ ಭಾರತದಲ್ಲಿ ಚುನಾವಣೆ  ನಡೆಯಲಿದ್ದು ಸುದ್ದಿಗಳ ವಿಶ್ವಾಸಾರ್ಹತೆಗೆ ಅತ್ಯಂತ ಪ್ರಾಮುಖ್ಯತೆ ಒದಗುತ್ತಿದೆ. ಆದರೆ ಭಾರತದ 83 ಪ್ರತಿಶತ ಜನರು ನಕಲಿ ಸುದ್ದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನುವುದು ಬಿಬಿಸಿ 'ನ್ಯೂಸ್ ಆಫ್ ನ್ಯೂಸ್' ಅಧ್ಯಯನ ಬಹಿರಂಗಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!