ದೇಶ

ಎಲ್ಲಾ ನಗರಗಳಲ್ಲಿಯೂ ಸುರಕ್ಷಿತ, ರಿಯಾಯಿತಿ ದರದ ಸಾರಿಗೆ ವ್ಯವಸ್ಥೆಗೆ ಸರ್ಕಾರ ಆದ್ಯತೆ - ಪ್ರಧಾನಿ ಮೋದಿ

Nagaraja AB
ನವದೆಹಲಿ: ಮೆಟ್ರೋ ರೈಲು ಸೇವೆಗೆ  ಸಂಬಂಧಿಸಿದಂತೆ  ಸರ್ಕಾರ ನೀತಿಯೊಂದನ್ನು ಜಾರಿಗೆ ತಂದಿದ್ದು, ಎಲ್ಲಾ ನಗರಗಳಲ್ಲಿಯೂ ಸುರಕ್ಷಿತ, ರಿಯಾಯಿತಿ ದರದಲ್ಲಿ ಸಾರಿಗೆ ವ್ಯವಸ್ಥೆಗೆ ಸರ್ಕಾರ ಆದ್ಯತೆ ನೀಡಲಿದೆ  ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿಂದು ಮುಂಡ್ಕಾ- ಬಹದುರ್ ಘರ್  ಮೆಟ್ರೋ ಹಸಿರು ಮಾರ್ಗವನ್ನು  ಪ್ರಧಾನಿ ನರೇಂದ್ರಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಿದ ಬಳಿಕ ಅವರು ಮಾತನಾಡಿ,  ಮೆಟ್ರೋ ವ್ಯವಸ್ಥೆಗಳಿಗೆ ಸಂಬಂಧಿಸಿದ ಅಂಶಗಳು  ಹೆಚ್ಚಿನ ಸುಸಂಬದ್ಧತೆ ಮತ್ತು ಕೆಲಸದ ಅವಶ್ಯಕತೆ ಇದೆ ಎಂದು ಭಾವಿಸಿರುವುದಾಗಿ ತಿಳಿಸಿದರು.
ಮೇಕ್ ಇನ್ ಇಂಡಿಯಾ ಪ್ರಚಾರಾಂದೋಲನದ ಭಾಗವಾಗಿ ಭಾರತದಲ್ಲಿಯೇ ಮೆಟ್ರೋ ರೈಲು ಬೋಗಿ ನಿರ್ಮಾಣದ ಗುರಿಯಲ್ಲಿ ಪ್ರಗತಿ ಸಾಧಿಸಲಾಗಿದೆ. ಮೆಟ್ರೋ ಸೇವೆಗೆ ಬೋಗಿಗಳ ವಿನ್ಯಾಸಕ್ಕಾಗಿ ಬೇರೆ ರಾಷ್ಟ್ರಗಳಿಗೆ ನಾವು ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದರು.
ನವ ಭಾರತ ಕಲ್ಪನೆಗೆ  ಹೊಸ, ಸೂಕ್ಷ್ಮ ಮೂಲಸೌಕರ್ಯ ಅಗತ್ಯ ಹೆಚ್ಚಾಗಿದ್ದು, ರಸ್ತೆ, ರೈಲ್ವೆ, ಹೆದ್ದಾರಿ, ವಿಮಾನ ನಿಲ್ದಾಣ, ಜಲಸಾರಿಗೆ ನಿರ್ಮಾಣ ಮಾಡಲಾಗಿದೆ. ಸಂಪರ್ಕ ಹಾಗೂ ಅಭಿವೃದ್ದಿ ಸಂಬಂಧಿತ ಯೋಜನೆಗಳು ನಿಗದಿತ ಅವಧಿಯಲ್ಲಿಯೇ ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.
SCROLL FOR NEXT