ಜಮ್ಮು-ಕಾಶ್ಮೀರ: ಕಥುವಾ ಅತ್ಯಾಚರ ಸಂತ್ರಸ್ತೆ ಕೋಮಾಗೆ ಜಾರಲು ಮಿತಿಮೀರಿದ ಸೆಡೆಟೀವ್ಸ್ ಕಾರಣ ಎಂದು ಫರೆನ್ಸಿಕ್ ತಜ್ಞರು ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಜಮ್ಮು-ಕಾಶ್ಮೀರದ ಪೊಲೀಸರು ಸಂತ್ರಸ್ತೆಯ ದೇಹದ ಸ್ಯಾಂಪಲ್ ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟಿದ್ದರು. ಕ್ರೈಮ್ ಬ್ರಾಂಚ್ ಪೊಲೀಸರಿಗೆ ತಜ್ಞರು ಕಳಿಸಿಕೊಟ್ಟಿರುವ ವರದಿಯ ಪ್ರಕಾರ ಸಂತ್ರಸ್ತೆಗೆ ಮಿತಿಮೀರಿದ ಸೆಡೆಟೀವ್ಸ್ ಗಳನ್ನು ನೀಡಲಾಗಿರುವುದು ಆಕೆ ಕೋಮಾಗೆ ಜಾರಲು ಕಾರಣವಾಗಿದೆ.
ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಂಜಾಬ್ ನ ಪಠಾಣ್ ಕೋಟ್ ಗೆ ಮುಂದಿನ ವಿಚಾರಣೆಯನ್ನು ತಜ್ಞರ ಅಭಿಪ್ರಾಯವನ್ನು ಕಳಿಸಿಕೊಡಲಾಗುತ್ತದೆ.