The victim Shailja Dwivedi the accused Nikhil Handa
ನವದೆಹಲಿ: ಪಶ್ಚಿಮ ದೆಹಲಿಯಲ್ಲಿ ಮತ್ತೊಬ್ಬ ಸೇನಾ ಮೇಜರ್ ಪತ್ನಿಯ ಹತ್ಯೆಯಲ್ಲಿ ಭಾಗಿಯಾದ ಆರೋಪದ ಮೇರೆಗೆ ಭಾರತೀಯ ಸೇನೆಯ ಮೇಜರ್ ಒಬ್ಬರನ್ನು ಉತ್ತರ ಪ್ರದೇಶದ ಮೀರತ್ ನಲ್ಲಿ ಬಂಧಿಸಲಾಗಿದೆ.
ದೆಹಲಿಯ ಕಾಂಟೋನ್ಮೆಂಟ್ ಬಳಿಯ ಬ್ರಾರ್ ಬಳಿ ಕತ್ತು ಸೀಳಿದ ರೀತಿಯಲ್ಲಿ ಆ ಮಹಿಳೆಯ ಮೃತ ದೇಹ ಕಂಡುಬಂದಿತ್ತು.
ಮೃತ ಮಹಿಳೆಯನ್ನು ಶೈಲಾಜ ದ್ವಿವೇದಿ ಎಂದು ಗುರುತಿಸಿದ ಪೊಲೀಸರು ಅಪಘಾತದಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದರು.
ಶೈಲಾಜ ದ್ವಿವೇದಿ ಹಾಗೂ ಆಕೆಯ ಪತಿ ಅಮಿತ್ ದ್ವಿವೇದಿ ಪಶ್ಚಿಮ ದೆಹಲಿ ನಾರೈನಾ ಪ್ರದೇಶಲ್ಲಿ ಆರು ವರ್ಷದ ಮಗನೊಂದಿಗೆ ಸೇನಾ ವಸತಿ ಸಂಕೀರ್ಣದಲ್ಲಿ ವಾಸಿಸುತ್ತಿದ್ದರು. ದೀಮಾಪುರ ಹಾಗೂ ನಾಗಲ್ಯಾಂಡ್ ನಲ್ಲಿ ಅವರು ಕೆಲಸದಲ್ಲಿದ್ದರಿಂದ ಇತ್ತೀಚಿಗೆ ಅವರು ತರಬೇತಿಗಾಗಿ ದೆಹಲಿಯಲ್ಲಿ ವಾಸಿಸುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ಮೃತ ದೇಹ ಪರಿಶೀಲನೆ ಬಳಿಕ ಕತ್ತು ಸೀಳಿ ಕೊಲೆ ಮಾಡಿರುವುದು ಕಂಡುಬಂದಿದೆ. ನಂತರ ಆರೋಪಿ ಆಕೆಯ ಮುಖದ ಮೇಲೆ ಕಾರು ಚಲಾಯಿಸಿ ಅಪಘಾತ ಎಂದು ಬಿಂಬಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯ ಪತಿ ಕೆಲಸ ಮಾಡುತ್ತಿದ್ದ ಕಚೇರಿಯ ಡ್ರೈವರ್ ನಿನ್ನೆ ದಿನ ಆಕೆಯನ್ನು ಸೇನಾ ಆಸ್ಪತ್ರೆ ಬಳಿಗೆ ಡ್ರಾಪ್ ಮಾಡಿದ್ದರು. ಆದರೆ, ನಂತರ ಆಕೆಯನ್ನು ಪಿಕ್ ಅಪ್ ಮಾಡಲು ಮತ್ತೆ ಬಂದಾಗ ಆಕೆ ಬರಲೇ ಇಲ್ಲ. ಆಕೆ ಫಿಜಿಯೋಥೆರಪಿಗೂ ಹಾಜರಾಗಿಲ್ಲ ಎಂಬುದು ತಿಳಿದುಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.