ಸ್ಪಚ್ಛ ಸಮೀಕ್ಷೆ 2018: ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರ; ಜಾರ್ಖಂಡ್ ಗೂ ಸ್ಥಾನ
ನವದೆಹಲಿ: ಜೂ.24 ರಂದು 2018 ನೇ ಸಾಲಿನ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯ ಪಟ್ಟಿ ಬಿಡುಗಡೆಯಾಗಿದ್ದು, ಮಧ್ಯಪ್ರದೇಶದ ಇಂದೋರ್ ಹಾಗೂ ಭೋಪಾಲ್ ದೇಶದ ಅತ್ಯಂತ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದಿವೆ.
ಸತತ ಎರಡನೇ ಅವಧಿಗೂ ಮಧ್ಯಪ್ರದೇಶದ ಇಂದೋರ್ ಹಾಗೂ ಭೋಪಾಲ್ ಭಾರತದ ಸ್ವಚ್ಛ ನಗರಗಳ ಪೈಕಿ ಮೊದಲ ಎರಡು ಸ್ಥಾನಗಳನ್ನು ಪಡೆದಿವೆ. ಮೊದಲೆರಡು ಸ್ಥಾನಗಳು ಮಧ್ಯಪ್ರದೇಶ ರಾಜ್ಯದ ಪಾಲಾಗಿದ್ದರೆ ಚಂಡೀಗಢ ಹಾಗೂ ನವದೆಹಲಿ (ಎನ್ ಡಿಎಂಸಿ) ಮೂರು ಹಾಗೂ 4 ನೇ ಸ್ಥಾನವನ್ನು ಪಡೆದಿವೆ.
2015 ರಲ್ಲಿ ಕೊನೆಯ ಸ್ಥಾನವನ್ನು ಪಡೆದಿದ್ದ ಜಾರ್ಖಂಡ್ 2018 ರಲ್ಲಿ ಅತ್ಯಂತ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದು, ಇದೇ ವೇಳೆ ದೆಹಲಿಯ ಕಂಟೋನ್ಮೆಂಟ್ ಬೋರ್ಡ್ (ಡಿಸಿಬಿ) ದೇಶದ ಅತ್ಯಂತ ಸ್ವಚ್ಛ ಕಂಟೋನ್ಮೆಂಟ್ ಬೋರ್ಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ನಂತರದ ಸ್ಥಾನಗಳಲ್ಲಿ ಅಲ್ಮೋರಾ ಹಾಗೂ ರಾಣಿಖೇತ್ ಕಂಟೋನ್ಮೆಂಟ್ 2 ನೇ ಹಾಗೂ 3 ನೇ ಸ್ಥಾನಗಳನ್ನು ಪಡೆದಿವೆ.
ಇದು ಸ್ವಚ್ಛ ಭಾರತದ ಕಥೆಯಾದರೆ, ಭಾರತದ ಸ್ವಚ್ಛತೆಯ ಮತ್ತೊಂದು ಮುಖವೂ ಈ ಸಮೀಕ್ಷೆಯಲ್ಲಿ ಬಹಿರಂಗವಾಗಿದ್ದು, ದೇಶದ 19-25 ಮಲಿನಗೊಂಡಿರುವ ನಗರಗಳು ಪಶ್ಚಿಮ ಬಂಗಾಳದಲ್ಲಿವೆ.