ಸಾಂದರ್ಭಿಕ ಚಿತ್ರ 
ದೇಶ

ನೈತಿಕ ಪೋಲೀಸ್ ಗಿರಿ: ಅಸೋಮ್ ನಲ್ಲಿ ಗುಂಪಿನಿಂದ ಹಲ್ಲೆಗೊಳಗಾದ ಮಹಿಳೆಯ ರಕ್ಷಣೆ

ಇತ್ತೀಚಿನ ದಿನಗಳಲ್ಲಿ ಅಸೋಮ್ ನಲ್ಲಿ ಉಗ್ರಗಾಮಿ ಚಟುವಟಿಕೆಗಳು ವ್ಯಾಪಕವಾಗಿ ಕ್ಷೀಣಿಸಿದೆ ಎನ್ನುವುದು ನಿಜ, ಆದರೆ ಇದೇ ವೇಳೆ ನೈತಿಕ ಪೋಲೀಸ್ ಗಿರಿ ತಪ್ಪು ತಿಳಿವಳಿಕೆಗಳಿಂದ ಆಗುವ......

ಗೌಹಾಟಿ (ಅಸೋಮ್): ಇತ್ತೀಚಿನ  ದಿನಗಳಲ್ಲಿ ಅಸೋಮ್ ನಲ್ಲಿ ಉಗ್ರಗಾಮಿ ಚಟುವಟಿಕೆಗಳು ವ್ಯಾಪಕವಾಗಿ ಕ್ಷೀಣಿಸಿದೆ ಎನ್ನುವುದು ನಿಜ, ಆದರೆ ಇದೇ ವೇಳೆ ನೈತಿಕ ಪೋಲೀಸ್ ಗಿರಿ  ತಪ್ಪು ತಿಳಿವಳಿಕೆಗಳಿಂದ ಆಗುವ ಹತ್ಯೆಗಳ ಸಂಖ್ಯೆ ಹೆಚ್ಚುತ್ತಿದೆ.  ಇದೀಗ ಅಸೋಮ್ ನ ನಗೌನ್ ಜಿಲ್ಲೆಯಲ್ಲಿ ಯುವ ಜೋಡಿಯೊಂದರ ಮೇಲೆ ನಡೆದ ದೌರ್ಜನ್ಯ ಸಂಬಂಧ ಪೋಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ 
ಶನಿವಾರ ರಾತ್ರಿ ಕಂಪೂರ್ ಪೋಲೀಸ್ ಠಾಣೆ ವ್ಯಾಪ್ತಿಯ ಜುಮುರ್ಮೂರ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಉಬೇದ್ ಉಲ್ಲಾ ಹಾಗೂ ವಿವಾಹಿತ ಮಹಿಳೆಯೊಬ್ಬಳ ಮೇಲೆ ಗ್ರಾಮದ ಸ್ಥಳೀಯ ಜನರ ಗುಂಪು ಹಲ್ಲೆ ನಡೆಸಿ ದೌರ್ಜನ್ಯವೆಸಗಿದೆ.ಅಲ್ಲದೆ ಮಹಿಳೆಯನ್ನು ಅವಹೇಳನಕಾರಿಯಾಗಿ ದೂಷಿಸಿದೆ. ಹಲ್ಲೆಯ ಮಾಹಿತಿ ಪಡೆದ ಪೋಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಅಪಾಯದಲ್ಲಿದ್ದ ಜೋಡಿಯನ್ನು ಪಾರು ಮಾಡಿದ್ದಾರೆ. ಸಧ್ಯ ಹಲ್ಲೆಗೊಳಗಾದವರನ್ನು ನಗೌನ್  ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
"ನಾವು ಐಪಿಸಿ ಸೆಕ್ಷನ್ 147, 342, 325, 307 ಮತ್ತು 354 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಮತ್ತು ಎಂಟು ಜನರನ್ನು ಬಂಧಿಸಿದ್ದೇವೆ. ತನಿಖೆ ನಡೆಯುತ್ತಿದೆ, "ಅಸೋಮ್ ಪೊಲೀಸ್ ಮುಖ್ಯ ವಕ್ತಾರ ರಾಜಿಬ್ ಸೈಕಿಯ ಹೇಳಿದ್ದಾರೆ. "ಪ್ರಕರಣವನ್ನು ಹಿರಿಯ ಪೋಲೀಸ್ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದು ಸಧ್ಯ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದೆ" ಅವರು ಹೇಳಿದ್ದಾರೆ.
ಕಳೆದ ವಾರವೂ ಇದೇ ರೀತಿಯಾದ ಘಟನೆ ಅಸೋಮ್ ನ ಗೋವಾಲ್ಪರಾ ಜಿಲ್ಲೆಯಲ್ಲಿ ನಡೆದಿದ್ದು ಅಲ್ಲಿ ಅಕ್ರಮ ಸಂಬಂಧ ಹೊಂದಿದ್ದಾರೆಂದು ಶಂಕಿಸಲಾದ ಜೋಡಿಯನ್ನು ಜನರ ಗುಂಪು ಥಳಿಸಿದ್ದಲ್ಲದೆ ಅವರಿಗೆ ’ವಿವಾಹ’ವನ್ನು ಮಾಡಿಸಿತ್ತು. ಘಟನೆ ಸಂಬಂಧ ಇದುವರೆಗೆ ಮೂವರನ್ನು ಬಂಧಿಸಲಾಗಿದ್ದು ಇನ್ನೂ ಹಲವರು ತಪ್ಪಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇದೇ ಜಿಲ್ಲೆಯಲಿ ನಡೆದ ಇನ್ನೊಂದು ಘಟನೆಯಲ್ಲಿ ಬುಡಕಟ್ಟು ಮಹಿಳೆಯೊಬ್ಬಳು ಮುಸ್ಲಿಮ್ ಯುವಕನೊಡನೆ ಸಂಬಂಧ ಹೊಂದಿರುವಳೆಂದು ಆರೋಪಿಸಿ ಜನಸಮೂಹವೊಂದು ಆ ಮಹಿಳೆಯ ಮೇಲೆ ದೌರ್ಜನ್ಯ, ಹಲ್ಲೆ ನಡೆಸಿದ್ದ ಘಟನೆ ವರದಿಯಾಗಿದ್ದು ಇದಕ್ಕೆ ಸಂಬಂಧಿಸಿ  ಹದಿನೈದು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಕ್ಕಳ ಕಳ್ಳರೆಂದು ಶಂಕಿಸಿ ಇಬ್ಬರು ಯುವಕರ ಹತ್ಯೆ ನಡೆಸಿದ್ದ ಘಟನೆಯ ನೆನಪುಇ ಇನ್ನೂ ಹಚ್ಚಹಸಿರಾಗಿದೆ.ಅಸೋಮ್ ನ ಬುಡಕಟ್ಟು ಜನಾಂಗದವರಲ್ಲಿ ಹಾಗೂ ಚಹಾ ಉತ್ಪಾದನಾ ಪ್ರದೇಶಗಳಲ್ಲಿ ಇನ್ನೂ ಮೂಢನಂಬಿಕೆಗಳ ಆಚರಣೆ ನಡೆಯುತ್ತಿದೆ. ಪೋಲೀಸರು ಈ ಕುರಿತಂತೆ ರಾಜ್ಯಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಭೀಕರ ಅಪಘಾತ: ಯೂಟರ್ನ್‌ ವೇಳೆ ಗೂಡ್ಸ್ ವಾಹನ ಪಲ್ಟಿ, ಕಬ್ಬಿಣದ ಸರಳು ಬಿದ್ದು ಬೈಕ್ ಸವಾರ ದಾರುಣ ಸಾವು, Video

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್