ನವದೆಹಲಿ: ಇನ್ನು ಮುಂದೆ ಪಾಸ್ ಪೋರ್ಟ್ ಪಡೆಯಲು ಯಾವುದೇ ಕಚೇರಿಯಲ್ಲೂ ವಿವಾಹ ಪ್ರಮಾಣ ಪತ್ರ ತೋರಿಸಬೇಕಾದ ಅಗತ್ಯವಿಲ್ಲ ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ವಿಚ್ಛೇದಿತ ಮಹಿಳೆಯರು ತಮ್ಮ ಮಾಜಿ ಪತಿ ಮತ್ತು ಅವರ ಮಕ್ಕಳ ಹೆಸರನ್ನು ತುಂಬಬೇಕಾದ ಅಗತ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಪಪಡಿಸಿದೆ.
ಪಾಸ್ ಪೋರ್ಟ್ ದಿವಸದ ಅಂಗವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸದಸ್ಯರು ಹಾಗೂ ಅನೇಕ ಪಾಸ್ ಪೋರ್ಟ್ ಸೇವಾ ಕೇಂದ್ರಗಳ ಅಧಿಕಾರಿಗಳೊಂದಿಗೆ ಮಾತನಾಡಿದ ಸುಷ್ಮಾ ಸ್ವರಾಜ್ , ವಿವಾಹಿತ ಪುರುಷ ಹಾಗೂ ಮಹಿಳೆಯರು ಪಾಸ್ ಪೋರ್ಟ್ ಕಚೇರಿಯಲ್ಲಿ ವಿವಾಹ ಪ್ರಮಾಣ ಪತ್ರ ತೋರಿಸಬೇಕೆಂಬ ಕಾನೂನನ್ನು ರದ್ದುಗೊಳಿಸಿರುವುದಾಗಿ ತಿಳಿಸಿದರು.
ವಿಚ್ಚೇದಿತ ಪುರುಷ ಹಾಗೂ ಆತನೊಂದಿಗಿರುವ ಮಕ್ಕಳ ಹೆಸರನ್ನು ನಮೂದಿಸಬೇಕೆ ಎಂಬ ಬಗ್ಗೆ ಕೆಲ ವಿಚ್ಚೇದಿತ ಮಹಿಳೆಯರು ದೂರು ಸಲ್ಲಿಸಿದ್ದರು. ಆದ್ದರಿಂದ ನಿಯಮವನ್ನು ಬದಲಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು.
ಲಖನೌದ ಪಾಸ್ ಪೋರ್ಟ್ ಸೇವಾ ಕೇಂದ್ರದಲ್ಲಿ ಮುಸ್ಲಿಮ್ ಗಂಡ ಮತ್ತು ಹಿಂದು ಪತ್ನಿ ನಡುವೆ ಜಗಳ ಉಂಟಾದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಮಧ್ಯೆ ಸುಷ್ಮಾ ಸ್ವರಾಜ್ ಪಾಸ್ ಪೋರ್ಟ್ ಗೆ ಅರ್ಜಿ ಹಾಗೂ ವಿತರಣೆಗಾಗಿ ನೂತನ ಸೇವಾ ಆಪ್ ವೊಂದನ್ನು ಇಂದು ಬಿಡುಗಡೆಗೊಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics