ನಿಕ್ಕಿ ಹ್ಯಾಲೆ 
ದೇಶ

ಭಾರತದೊಂದಿಗಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲು ಇಲ್ಲಿಗೆ ಬಂದಿದ್ದೇನೆ: ನಿಕ್ಕಿ ಹ್ಯಾಲೆ

ವಿಶ್ವದ ಅಲ್ಲಲ್ಲಿ ಅನಿಶ್ಚಿತತೆ ಮತ್ತು ಕಲಹ ಏರ್ಪಟ್ಟಿರುವ ಸಂದರ್ಭದಲ್ಲಿ ಅಮೆರಿಕಾಕ್ಕೆ ಭಾರತದ ಮೇಲಿರುವ ...

ನವದೆಹಲಿ: ವಿಶ್ವದ ಅಲ್ಲಲ್ಲಿ ಅನಿಶ್ಚಿತತೆ ಮತ್ತು ಕಲಹ ಏರ್ಪಟ್ಟಿರುವ ಸಂದರ್ಭದಲ್ಲಿ ಅಮೆರಿಕಾಕ್ಕೆ ಭಾರತದ ಮೇಲಿರುವ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಭೇಟಿ ನೀಡಿರುವುದಾಗಿ ವಿಶ್ವಸಂಸ್ಥೆಯ ಅಮೆರಿಕಾ ರಾಯಭಾರಿ ನಿಕ್ಕಿ ಹ್ಯಾಲೆ ಪ್ರತಿಕ್ರಿಯಿಸಿದ್ದಾರೆ.

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಅವರು, ಭಾರತದ ಮೇಲಿನ ಪ್ರೀತಿಯನ್ನು ಗಟ್ಟಿಗೊಳಿಸಲು ನಾನು ಮತ್ತೆ ಇಲ್ಲಿಗೆ ಬಂದಿದ್ದೇನೆ. ಭಾರತ ಮತ್ತು ಅಮೆರಿಕಾ ಮುಂದಿನ ದಿನಗಳಲ್ಲಿ  ಬಾಂಧವ್ಯ ವೃದ್ಧಿಸಿಕೊಂಡರೆ ಉತ್ತಮ ಎಂಬ ನಂಬಿಕೆಯಲ್ಲಿ ನಾವಿದ್ದೇವೆ. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಅಮೆರಿಕಾ ದೇಶಗಳು ಮತ್ತಷ್ಟು ಹತ್ತಿರವಾಗುತ್ತಿವೆ ಎಂದರು.

ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ವಿಶ್ವಸಂಸ್ಥೆಯ ಅಮೆರಿಕಾ ರಾಯಭಾರಿಯಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ತಮ್ಮ ಭೇಟಿ ಸಂದರ್ಭದಲ್ಲಿ ಅವರು ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳು, ಉದ್ಯಮಿ ನಾಯಕರುಗಳು, ವಿದ್ಯಾರ್ಥಿಗಳು ಮತ್ತು ಅಂತರ ಧರ್ಮೀಯ ಸಮುದಾಯದವರನ್ನು ಭೇಟಿ ಮಾಡಲಿದ್ದಾರೆ. ಇವರ ಭೇಟಿ ವೇಳೆ ಭಾರತ-ಅಮೆರಿಕಾ ಕಾರ್ಯತಂತ್ರ ಬಾಂಧವ್ಯಗಳು ಮತ್ತು ಮಹತ್ತರ ಜಾಗತಿಕ ಅಭಿವೃದ್ಧಿ ವಿಷಯಗಳು ಹಾಗೂ ಜಗತ್ತಿನ ಹಳೆಯ ಪ್ರಜಾಪ್ರಭುತ್ವ ದೇಶಗಳ ಆಡಳಿತ ಬಗ್ಗೆ ಮಾತುಕತೆ ಚರ್ಚೆ ನಡೆಯುವ ಸಾಧ್ಯತೆಯಿದೆ.

ಜಗತ್ತಿನಲ್ಲಿ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕಾ ಬಹುಹಂತಗಳಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸಲಿವೆ. ಅದು ಭಯೋತ್ಪಾದನೆ ನಿಗ್ರಹ ವಿಷಯದಲ್ಲಿಯಾಗಿರಬಹುದು ಅಥವಾ ಪ್ರಜಾಪ್ರಭುತ್ವ ಅವಕಾಶಗಳು ಮತ್ತು ಸೇನೆಯ ಬಾಂಧವ್ಯ ವಿಚಾರದಲ್ಲಿಯಾಗಿರಬಹುದು ನಾವು ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಬಯಸುತ್ತೇವೆ ಎಂದರು.

ಇದಕ್ಕೂ ಮುನ್ನ ಅವರು ದೆಹಲಿಯಲ್ಲಿ ಹುಮಾಯೂನ್ ಸಮಾಧಿಗೆ ಭೇಟಿ ನೀಡಿದರು. ತಮ್ಮ ಪೂರ್ವಜರು ನೆಲೆಸಿದ್ದ ಈ ನಾಡು ಭಾರತ ಇಂದಿಗೂ ಸುಂದರವಾಗಿದೆ, ಹಳೆ ಸೌಂದರ್ಯವನ್ನು ಉಳಿಸಿಕೊಂಡಿದೆ. ಭಾರತ ಸಂಸ್ಕೃತಿಯ ನೆಲೆವೀಡಾಗಿದೆ ಎಂದು ಪ್ರಶಂಸಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಕೊನೆಗೂ ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ