ಅಮೆರಿಕಾ ರಾಯಭಾರಿ ನಿಕ್ಕಿ ಹ್ಯಾಲೆ-ನರೇಂದ್ರ ಮೋದಿ ಭೇಟಿ
ನವದೆಹಲಿ: ಯುನೈಟೆಡ್ ನೇಷನ್ಸ್ ನ ಅಮೆರಿಕಾ ರಾಯಭಾರಿ ನಿಕ್ಕಿ ಹ್ಯಾಲೆ ಬುಧವಾರ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರು ಭಾರತ ಇರಾನ್ ತೈಲದ ಮೇಲಿನ ಅವಲಂಬನೆಯಿಂದ ದೂರವಾಗಬೇಕು ಎಂದಿದ್ದಾರೆ. ಹಾಗೆಯೇ ಭಾರತ ಅಫ್ಘಾನಿಸ್ಥಾನ್ ಕಾರಿಡಾರ್ ಯೋಜನೆಗಾಗಿ ಇರಾನ್ ಬಂದರನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಅಮೆರಿಕಾ ಸಮ್ಮತಿಸುತ್ತದೆ ಎಂದರು.
ನವೆಂಬರ್ ತಿಂಗಳಿನಿಂದ ಇರಾನ್ ನ ತೈಲ ಆಮದನ್ನು ಕಡಿತಗೊಳಿಸಬೇಕೆಂದು ಅಮೆರಿಕಾ ಜಗತ್ತಿನ ರಾಷ್ಟ್ರಗಳಿಗೆ ಕರೆ ನಿಡಿದೆ.ಇದೇ ವೇಳೆ ಇದಕ್ಕೆ ಸಂಬಂಧಿಸಿ ಯಾವ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದೂ ಅದು ಸ್ಪಷ್ಟಪಡಿಸಿದೆ. ಇರಾನ್ ವಸ್ತುಗಳ ಆಮದನ್ನು ಕಡಿತಗೊಳಿಸಲು ಮಿತ್ರರಾಷ್ಟ್ರಗಳ ಮೇಲೆ ಒತ್ತಡ ಹೇರಬೇಕೆಂದು ಟ್ರಂಪ್ ಆಡಳಿತ ಮಂಡಳಿ ಬಯಸಿದೆ.
ಇದೇ ವೇಳೆ ಇರಾನ್ ಚಹಬಾದ್ ಬಂದರನ್ನು ಭಾರತ ಅಫ್ಘಾನಿಸ್ಥನಕ್ಕೆ ಸರಕು ಸಾಗಣೆ ಕಾರಿಡಾರಿನ ಯೋಜನೆ ಅಂಗವಾಗಿ ಅಭಿವೃದ್ದಿಪಡಿಸಿದೆ. ಇದರಿಂದ ಲಕ್ಷಾಂತರ ರು. ವ್ಯಾಪಾರ ನಡೆಯುವ ಸಾಧ್ಯತೆ ಇದೆ ಅಲ್ಲದೆ ಪಾಕಿಸ್ತಾನದೊಡನೆ ಅಫ್ಘಾನಿಸ್ಥಾನ ಹೆಚ್ಚಿನ ವ್ಯವಹಾರ ನಡೆಸುವುದನ್ನು ತಡೆಯುವುದಕ್ಕೆ ಸಹಕಾರಿಯಾಗಲಿದೆ.