ದೇಶ

10 ವರ್ಷದ ಬಾಲಕಿ ಜೊತೆ 40 ವರ್ಷದವನ ಮದುವೆಗಾಗಿ ಲಂಚ ಸ್ವೀಕರಿಸಿದ ಮಹಿಳಾ ಪೊಲೀಸ್!

Vishwanath S
ತೆಲಂಗಾಣ: 10 ವರ್ಷದ ಬಾಲಕಿ ಜೊತೆಗೆ ನಲವತ್ತು ವರ್ಷದ ವ್ಯಕ್ತಿ ಮದುವೆಗಾಗಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಲಂಚ ಪಡೆದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 
ಅಪ್ರಾಪ್ತ ವಿವಾಹ ವಿರುದ್ಧ ದೇಶದೆಲ್ಲಡೆ ಹೋರಾಟಗಳು ನಡೆಯುತ್ತಿದ್ದರೆ ಇತ್ತ ತೆಲಂಗಾಣದ ಮಹಿಳಾ ಪೊಲೀಸ್ ಅಧಿಕಾರಿ ಮಾತ್ರ ಲಂಚ ಪಡೆದು ಸುಸೂತ್ರವಾಗಿ ಮದುವೆಯಾಗುವಂತೆ ನೋಡಿಕೊಂಡಿದ್ದಾರೆ. 
ಅಪ್ರಾಪ್ತ ಬಾಲಕಿಗೆ ಮದುವೆ ಮಾಡಲಾಗುತ್ತಿದ್ದು ಇದನ್ನು ತಡೆಯುವಂತೆ ಮಕ್ಕಳ ರಕ್ಷಣೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಮಹಿಳಾ ಪೊಲೀಸ್ ಅಧಿಕಾರಿ ಮಾತ್ರ ಸಣ್ಣ ಮೊತ್ತದ ಹಣಕ್ಕಾಗಿ ಮದುವೆಯಾಗಲು ಬಿಟ್ಟಿದ್ದಾರೆ. 
ಅಪ್ರಾಪ್ತ ಮದುವೆಗೆ ಸಂಬಂಧಿಸಿದಂತೆ ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಆದೇಶಿಸಿದ್ದಾರೆ. ಜತೆಗೆ ಮದುವೆಗೆ ಸಹಾಯ ಮಾಡಿದ ಎಲ್ಲಾ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
SCROLL FOR NEXT