ಮುಂಬೈ ವಿಮಾನ ಪತನ: ತನ್ನ ಜೀವವನ್ನೇ ಪಣಕ್ಕಿಟ್ಟು ಹಲವು ಜೀವಗಳನ್ನು ಉಳಿಸಿದ ಮಹಿಳಾ ಪೈಲೆಟ್
ನವದೆಹಲಿ: ಮುಂಬೈನ ವಸತಿ ಪ್ರದೇಶದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು, ವಿಮಾನ ಪತನಗೊಳ್ಳುವುದಕ್ಕೂ ಮುನ್ನ ಮಹಿಳಾ ಪೈಲೆಟ್ ತಮ್ಮ ಜೀವವನ್ನೇ ಪಣಕ್ಕಿಟ್ಟು ನಿರ್ಜನ ಪ್ರದೇಶಕ್ಕೆ ಕೊಂದೊಯ್ದು ಹಲವು ಜೀವಗಳನ್ನು ಉಳಿಸಿದ್ದಾರೆ.
ಘಟನೆಯಲ್ಲಿ ಮಹಿಳಾ ಪೈಲೆಟ್ ಸಹ ಸಾವನ್ನಪ್ಪಿದ್ದಾರೆ. ಆದರೆ ಆಕೆಯ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಮಾನಯಾನ ಖಾತಯ ಮಾಜಿ ಸಚಿವ ಪ್ರಫುಲ್ ಪಟೇಲ್ ಸಹ ಮಹಿಳಾ ಪೈಲಟ್ ನ ತ್ಯಾಗಕ್ಕೆ ತಲೆಬಾಗಿದ್ದು, ಶ್ರದ್ಧಾಂಜಲಿ ಕೋರಿದ್ದಾರೆ.
ಮುಂಬೈನ ಘಾಟ್ ಕೋಪರ್ ಬಳಿಯ ಸರ್ವೋದಯ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಬಳಿ ವಿಮಾನ ಪತನಗೊಂಡಿದ್ದು ವಿಮಾನದಲ್ಲಿದ್ದ ಮುಖ್ಯ ಪೈಲಟ್ ಪಿಎಸ್ ರಜಪೂತ್, ಕೋ ಪೈಲಟ್ ಮಾರಿಯಾ ಝುಬೇರಿ, ಇಂಜಿನಿಯರ್ ಸುರ್ಬಿ ಮತ್ತು ಟೆಕ್ನಿಷನ್ ಮನೀಶ್ ಪಾಂಡೆ ಹಾಗೂ ಓರ್ವ ಸ್ಧಳೀಯ ವ್ಯಕ್ತಿ ಸೇರಿ ಐವರು ಸಜೀವ ದಹನವಾಗಿದ್ದಾರೆ.
ವಿಮಾನ ಜನನಿಬಿಢ ಪ್ರದೇಶದಲ್ಲಿ ಪತನಗೊಳ್ಳಬೇಕಿತ್ತು, ಆದರೆ ಪೈಲೆಟ್ ತನ್ನ ಜೀವವನ್ನೇ ಪಣಕ್ಕಿಟ್ಟು ಸಾಧ್ಯವಾದಷ್ಟೂ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದಿದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics