ಪ್ರಕಾಶ್ ರಾಜ್ 
ದೇಶ

ಗೌರಿ ಹಂತಕರಿಂದ ಕೊಲೆಗೆ ಸಂಚು: ನನ್ನ ಧ್ವನಿ ಮತ್ತಷ್ಟು ಗಟ್ಟಿ- ಪ್ರಕಾಶ್ ರಾಜ್

ಹಿರಿಯ ಪತ್ರಕರ್ತೆ, ಗೌರಿ ಲಂಕೇಶ್ ಹಂತಕರಿಂದ ಕೊಲೆಗೆ ಸಂಚು ವರದಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ, ನಿರ್ದೇಶಕ ಪ್ರಕಾಶ್ ರಾಜ್ , ಈ ರೀತಿಯ ಬೆದರಿಕೆಗಳಿಂದ ನನ್ನ ಧ್ವನಿ ಮತ್ತಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.

ಹೈದ್ರಾಬಾದ್: ಹಿರಿಯ ಪತ್ರಕರ್ತೆ, ಗೌರಿ ಲಂಕೇಶ್ ಹಂತಕರಿಂದ ಕೊಲೆಗೆ ಸಂಚು ವರದಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ, ನಿರ್ದೇಶಕ ಪ್ರಕಾಶ್ ರಾಜ್, ಈ ರೀತಿಯ ಬೆದರಿಕೆಗಳಿಂದ ನನ್ನ ಧ್ವನಿ ಮತ್ತಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.
ಕೊಲೆ ಸಂಚು ವರದಿ ಕೇಳಿ ನನ್ನಗೆ ನಗು ಬಂದಿತ್ತು. ಎಲ್ಲರಿಗೂ ಬೆದರಿಕೆ ಅಲ್ಲ. ಎಲ್ಲರಿಗೂ ನಾನು ಬೆದರಿಕೆ ಅಲ್ಲ. ಈ ರೀತಿಯ ಶಕ್ತಿಗಳು ದೇಶದಲ್ಲಿ ದ್ವೇಷವನ್ನು ಹರಡುತ್ತಿವೆ ಎಂದು ಎಎನ್ ಐ ಸುದ್ದಿಸಂಸ್ಥೆಗೆ ಪ್ರಕಾಶ್ ರಾಜ್ ಹೇಳಿದ್ದಾರೆ.
ಯುವಕರಲ್ಲಿ  ತಪ್ಪು ಅಭಿಪ್ರಾಯವನ್ನು ಮೂಡಿಸುವುದರ  ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಯುವಜನಾಂಗದ ಬ್ರೈನ್ ವಾಶ್ ಮಾಡುತ್ತಿರುವುದರ ಬಗ್ಗೆ ನನ್ನಗೆ ಆತಂಕವಿದೆ. ಏಕೆ ಅವರನ್ನು ಬ್ರೈನ್ ವಾಶ್ ಮಾಡಲಾಗುತ್ತಿದೆ. ಅವರು ಎಂತಹ ಸೊಕ್ಕಿನ, ಭಯವಿಲ್ಲದವರು ಎಂಬುದನ್ನು ಈ ಬೆದರಿಕೆಗಳಿಂದಲೇ ತಿಳಿಯಬಹುದಾಗಿದೆ ಎಂದರು.
ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡ, ನಟ ಪ್ರಕಾಶ್ ರಾಜ್ ಅವರನ್ನು ಹತ್ಯೆ ಮಾಡಲು ಗೌರಿ ಹಂತಕರ ತಂಡ ಸಂಚು ರೂಪಿಸಿತ್ತು  ಎಂಬ ವರದಿ ಕುರಿತು ಪ್ರಕಾಶ್ ರಾಜ್ ನಿನ್ನೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು.
ಮೌನ ಧ್ವನಿಗಳ ವಿವರಣೆ ನೋಡಿ, ನನ್ನ ಧ್ವನಿ ಈಗ  ಮತ್ತಷ್ಟು ಗಟ್ಟಿಯಾಗಿದೆ. ಇಂತಹ ದ್ವೇಷ ರಾಜಕಾರಣದಿಂದ ದೂರ ಆಗಲು ನೀವು ಯೋಚನೆ ಮಾಡುತ್ತಿರಾ ಎಂದು ಪ್ರಕಾಶ್ ರಾಜ್  ಸಂದೇಶದಲ್ಲಿ ತಿಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT