ತಂದೆ ಬೈಯ್ದದ್ದಕ್ಕೆ 2 ಕೆಜಿ ಸಿಮೆಂಟ್ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಪುತ್ರ! 
ದೇಶ

ತಂದೆ ಬೈಯ್ದದ್ದಕ್ಕೆ 2 ಕೆಜಿ ಸಿಮೆಂಟ್ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಪುತ್ರ!

ತಂದೆ ಬೈಯ್ದರೆಂಬ ಕಾರಣಕ್ಕೆ ಮಗನೊಬ್ಬ 2 ಕೆಜಿ ಸಿಮೆಂಟ್ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಾರ್ಖಂಡ್ ನ ಪಾಕೂರ್‌ ಜಿಲ್ಲೆ ಬಹುದಹ ಎನ್ನುವಲ್ಲಿ ನಡೆದಿದೆ.

ಪಾಕೂರ್‌  (ಜಾರ್ಖಂಡ್): ತಂದೆ ಬೈಯ್ದರೆಂಬ ಕಾರಣಕ್ಕೆ ಮಗನೊಬ್ಬ 2 ಕೆಜಿ ಸಿಮೆಂಟ್ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಾರ್ಖಂಡ್ ನ ಪಾಕೂರ್‌ ಜಿಲ್ಲೆ ಬಹುದಹ  ಎನ್ನುವಲ್ಲಿ ನಡೆದಿದೆ.
19ದ ಹರೆಯದ ಯುವಕ ಬೀಮಾಲ್‌ ಪಾಲ್ ಆತ್ಮಹತ್ಯೆಗೆ ಮುಂದಾದ ಯುವಕನಾಗಿದ್ದು ಯುವಕನ ಹೊಟ್ಟೆಯಲ್ಲಿ ಗಟ್ಟಿಯಾಗಿದ್ದ ಸಿಮೆಂಟ್ ಅನ್ನು ಪಶ್ಚಿಮ ಬಂಗಾಳದ ವರ್ಧಮಾನ್‌ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿದೆ.
ಬೀಮಾಲ್‌ ನ ತಂದೆ ಆ ಊರಿನಲ್ಲಿ ಪ್ರಸಿದ್ದರಾದ ಕುಂಬಾರರಾಗಿದ್ದು ಮಗ ತಾನು ಮಾಡುವ ಕೆಲಸಕ್ಕೆ ನೆರವಾಗದೆ ಸದಾ ಮೊಬೈಲ್ ನೋಡಿಕೊಂಡಿರುವುದನ್ನು ಕಂಡ ತಂದೆ ಬೇಸರದಿಂದ ಬೈದಿದ್ದಾರೆ. ಅಲ್ಲದೆ ದೃಷ್ಟಿದೋಷವಿದ್ದ ಆತನಿಗೆ ಆತನ ಸ್ನೇಹಿತರು ಸಹ "ನಿನು ಮುಂದೊಂದು ದಿನ ಸಂಪೂರ್ಣ ಕುರುಡನಾಗಲಿದ್ದೀಯೆ, ಆಗ ನಿನ್ನಿಂದ ಯಾವ ಕೆಲಸಗಳನ್ನು ಮಾಡಲಾಗುವುದಿಲ್ಲ" ಎಂದು ವ್ಯಂಗ್ಯವಾಡುತ್ತಿದ್ದರು. ಇದೆಲ್ಲದರಿಂದ ಖಿನ್ನತೆಗೊಳಗಾದ ಯುವಕ  ಬೀಮಾಲ್‌ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತಂದೆ ಮಡಿಕೆ, ಮೂರ್ತಿಗಳನ್ನು ಮಾಡಲಿಕ್ಕೆಂದು ಕಲಸಿಟ್ಟಿದ್ದ  ಸಿಮೆಂಟ್ ಕಾಂಕ್ರೀಟ್ ಅನ್ನು ತಿಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನೋಡಿದ್ದಾನೆ. ಹೀಗೆ ಸಿಮೆಂಟ್ ತಿಂದ ಬೀಮಾಲ್‌ ಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮೊದಲಿಗೆ ಆಸ್ಪತ್ರೆಗೆ ದಾಖಲಾಗಲು ಒಪ್ಪದ ಯುವಕನನ್ನು ಬಳಿಕ ಬರ್ದ್ವಾನದಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
"ಸ್ನೇಹಿತರ ಮಾತನ್ನು ತಲೆಗೆ ಹಚ್ಚಿಕೊಳ್ಳಬೇಡ ಎನ್ನುವುದಾಗಿ ನಾನು ಅನೇಕ ಬಾರಿ ಹೇಳುತ್ತಿದ್ದೆ. ಕಣ್ಣಿನ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಕೊಡಿಸುವುದಾಗಿಯೂ ಹೇಳಿದ್ದೆ. ಕೆಲವೊಮ್ಮೆ ಅವನು ನನಗೆ ಕೆಲಸದಲ್ಲಿ ಸಹಕರಿಸದೆ ಮೊಬೈಲ್ ನಲ್ಲೇ ಸದಾ ಮುಳುಗಿರುತ್ತಿದ್ದ. ಆಗ ನಾನು ಅವನನ್ನು ಬೈಯ್ದದ್ದಿದೆ. ಇದಕ್ಕೆ ಬೇಸರಪಟ್ಟು ಆತ ಇಂತಹಾ ಕೃತ್ಯ ಎಸಗುವನೆಂದು ಭಾವಿಸಿರಲಿಲ್ಲ"  ಬೀಮಾಲ್‌ ನ ತಂದೆ ನುಡಿದರು.
ಶಸ್ತ್ರಚಿಕಿತ್ಸೆ ಬಳಿಕ ಮಾತನಾಡಿದ ವೈದ್ಯ  ಡಾ. ಸ್ನೇಹಾಂಶು ಪಾನ್‌ "ನಮ್ಮಲ್ಲಿಯೂ ಉತ್ತಮ ವೈದ್ಯರಿದ್ದಾರೆ  ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಯಾವ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಆಗಬೇಕಾದಲ್ಲಿ ರೋಗಿಗಳನ್ನು ಕೋಲ್ಕತ್ತಾ ಅಥವಾ ದಕ್ಷಿಣ ಭಾರತಕ್ಕೆ ಸಾಗಿಸಲಾಗುತ್ತದೆ. ಆದರೆ ಈ ಯಶಸ್ವಿ ಶಸ್ತ್ರಚಿಕಿತ್ಸೆಯು ನಮ್ಮಲ್ಲಿನ ಸಾಮರ್ಥ್ಯವನ್ನು ತೋರಿಸಿದೆ" ಎಂದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT