ಪುರಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರಿಗೆ ಪುರಿಯ ಜಗನ್ನಾಥ ದೇವಾಲಯದಲ್ಲಿ ಯಾವುದೇ ರೀತಿಯ ದುರ್ವರ್ತನೆ ತೋರಿಲ್ಲ ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.
ರಾಷ್ಟ್ರಪತಿ ದಂಪತಿ ಭೇಟಿ ನೀಡಿದಾಗ ಯಾರು ಅವರ ಜೊತೆ ದುರ್ವರ್ತನೆ ತೋರಿಲ್ಲ ಎಂದು ಅರ್ಚಕ ದಾಮೋದರ್ ಮಹಾಸೌರ್ ತಿಳಿಸಿದ್ದಾರೆ. ರಾಷ್ಟ್ರಪತಿ ದಂಪತಿ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಅಂದರೆ ಮಾರ್ಚ್ 22 ರಂದು ನಾನು ಕೂಡ ಜೊತೆಯಲ್ಲಿಯೇ ಇದ್ದೆ,. ಯಾರು ಅವರ ಜೊತೆ ಅನುಚಿತಕವಾಗಿ ವರ್ತಿಸಿಲ್ಲ ಎಂದು ಸ್ಪಷ್ಚ ಪಡಿಸಿದ್ದಾರೆ.
ಕೋವಿಂದ್ ದಂಪತಿ ಜೊತೆ ಅನುಚಿತವಾಗಿ ವರ್ತಿಸಿದ ಸಂಬಂಧ ಮೂರು ತಿಂಗಳ ನಂತರ ರಾಷ್ಚ್ರಪತಿ ಭವನದಿಂದ ಜಿಲ್ಲಾಡಳಿತಕ್ಕೆ ದೂರು ಬಂದಿತ್ತು. ಆದರೆ ಈ ಆರೋಪ ಆಧಾರ ರಹಿತ, ಹೀಗಾಗಿ ನಾವು ಪುರಿ ಜಿಲ್ಲಾ ಮ್ಯಾಜಿಸ್ಚ್ರೇಟ್ ಪ್ರದೀಪ್ ಜನ ವಿರುದ್ದ ಎಫ್ ಐ ಆರ್ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.