ದತ್ತಾತ್ರೇಯ ಹೊಸಬಾಳೆ 
ದೇಶ

ಆರ್ ಎಸ್ಎಸ್ ನ ಟಾಪ್ 2 ನೇ ಹುದ್ದೆಗೆ ದತ್ತಾತ್ರೇಯ ಹೊಸಬಾಳೆ ನೇಮಕ?

ಮುಂದಿನ ವಾರ ನಾಗ್ಪುರದಲ್ಲಿ ನಡೆಯಲಿರುವ ಆರ್ ಎಸ್ಎಸ್ ನ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಸಂಘಟನೆ ಹಾಗೂ ಸಹ ಸಂಘಟನೆಗಳಿಗೆ ಸಂಬಂಧಿಸಿದಂತೆ ಮಹತ್ತರ ಬದಲಾವಣೆಗಾಳುವ ಸಾಧ್ಯತೆಗಳಿವೆ.

ಮುಂಬೈ: ಮುಂದಿನ ವಾರ ನಾಗ್ಪುರದಲ್ಲಿ ನಡೆಯಲಿರುವ ಆರ್ ಎಸ್ಎಸ್ ನ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಸಂಘಟನೆ ಹಾಗೂ ಸಹ ಸಂಘಟನೆಗಳಿಗೆ ಸಂಬಂಧಿಸಿದಂತೆ ಮಹತ್ತರ ಬದಲಾವಣೆಗಾಳುವ ಸಾಧ್ಯತೆಗಳಿವೆ. 
ಸುಮಾರು 15,00 ಪ್ರತಿನಿಧಿಗಳು ಆರ್ ಎಸ್ ಎಸ್ ನ ಪ್ರತಿನಿಧಿ ಸಭಾದಲ್ಲಿ ಭಾಗವಹಿಸಲಿದ್ದು, ಸರ್ಕಾರ್ಯವಾಹ್( ಪ್ರಧಾನ ಕಾರ್ಯದರ್ಶಿ)ಯನ್ನು ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಯ್ಕೆ ಮಾಡಲಾಗುತ್ತದೆ. 
ಈ ಬಾರಿಯ ಸಭೆಯಲ್ಲಿ ಆರ್ ಎಸ್ಎಸ್ ನ ಪ್ರಧಾನ ಕಾರ್ಯದರ್ಶಿ ನೇಮಕವಾಗುವ ಸಾಧ್ಯತೆ ಇದ್ದು, ಆರ್ ಎಸ್ಎಸ್ ನ ಟಾಪ್ ಎರಡನೇ ಹುದ್ದೆಗೆ ಕರ್ನಾಟಕದವರಾದ ದತ್ತಾತ್ರೇಯ ಹೊಸಬಾಳೆ ನೇಮಕವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 
ಪ್ರಸ್ತುತ ಸುರೇಶ್ ಭಯ್ಯಾಜಿ ಜೋಷಿ ಸಂಘದ ಸರ್ಕಾರ್ಯವಾಹ್ ಸ್ಥಾನದಲ್ಲಿದ್ದು 2009 ರಲ್ಲಿ ನೇಮಕಗೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಆರೋಗ್ಯ ಸ್ಥಿತಿ ಸರಿ ಇರದ ಕಾರಣ ಜೋಷಿ ಅವರೊಂದಿಗೆ ಜಂಟಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ದತ್ತಾತ್ರೇಯ ಹೊಸಬಾಳೆ ಸಹ ಕಾರ್ಯನಿರ್ವಹಿಸುತ್ತಿದ್ದರು.  ಈಗ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರನ್ನು ಆರ್ ಎಸ್ಎಸ್ ನ ಸರ್ಕಾಯವಾಹ್ ಹುದ್ದೆಗೆ  ಅಧಿಕೃತವಾಗಿ ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ