ಬೀಜಿಂಗ್: ಚೀನಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಎಚ್ಚರಿಕೆ ನೀಡಿದ್ದು, ತನ್ನ ಹಿತಾಸಕ್ತಿಗಳಿಗೆ ಅಮೆರಿಕಾದಿಂದ ಧಕ್ಕೆ ಉಂಟಾದರೆ ಅಮೆರಿಕ ಅದಕ್ಕೆ ತಕ್ಕ ಪಾಠ ಕಲಿಯಬೇಕಾಗುತ್ತದೆ ಎಂದು ಹೇಳಿದೆ.
ಚೀನಾ ಅಮೆರಿಕಾದೊಂದಿಗೆ ವಾಣಿಜ್ಯ/ ವ್ಯಾಪಾರ ಯುದ್ಧವನ್ನು ಬಯಸುವುದಿಲ್ಲ. ಆದರೆ ಚೀನಾದ ಹಿತಾಸಕ್ತಿಗಳಿಗೆ ಧಕ್ಕೆ ಉಂಟಾದರೆ ಚೀನಾ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಚೀನಾದ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ನ ವಕ್ತಾರ ಝಾಂಗ್ ಯೆಸುಯಿ ಹೇಳಿದ್ದಾರೆ.
ಟ್ರೇಡ್ ವಾರ್ ನ ಪರವಾಗಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಸ್ಟೀಲ್ ಆಮದಿನ ಮೇಲೆ ಶೇ.25 ರಷ್ಟು ಹಾಗೂ ಅಲ್ಯೂಮಿನಿಯಂ ಮೇಲೆ ಶೇ.10 ರಷ್ಟು ಶುಲ್ಕ ವಿಧಿಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಚೀನಾ ಟ್ರಂಪ್ ಆಡಳಿತದ ನಿರ್ಧಾರದ ವಿರುದ್ಧ ಕಿಡಿ ಕಾರಿದ್ದು, ಚೀನಾ ಹಿತಾಸಕ್ತಿಗಳಿಗೆ ಧಕ್ಕೆಯುಂಟಾದರೆ ಎಚ್ಚರಿಕೆ... ಎಂದು ಹೇಳಿದೆ.