ನವದೆಹಲಿ: 12 ಸಾವಿರ ಕೋಟಿ ರೂಪಾಯಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಭಾಗಿಯಾಗಿರುವ ವಿದೇಶಿ ವಂಚಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಾರಿಷಸ್ ಭರವಸೆ ನೀಡಿದೆ.
ಹಗರಣದಲ್ಲಿ ಶಾಮೀಲಾಗಿರುವ ಸಂಸ್ಥೆಗಳು ಅಥವಾ ವ್ಯಕ್ತಿಗಳು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಾರಿಷಸ್ ನ ಆರ್ಥಿಕ ಸೇವಾ ಆಯೋಗ ಹೇಳಿದೆ. ಪಿಎನ್ ಬಿ ಹಗರಣಕ್ಕೂ ಮಾರಿಷಸ್ ನಲ್ಲಿರುವ ಬ್ಯಾಂಕ್ ಗಳಿಗೂ ಸಂಬಂಧವಿದೆಯೆ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಎಫ್ ಎಸ್ ಸಿ ಹೇಳಿದೆ.
ಉದ್ಯಮಿಗಳಿಗೆ ಸಾಲ ನೀಡುವುದಕ್ಕಾಗಿ ವಿದೇಶಗಳಲ್ಲಿರುವ ಭಾರತೀಯ ಬ್ಯಾಂಕ್ ಗಳಿಗೆ ನೀಡಲಾಗುವ ಎಲ್ಒ ಯು ಗಳನ್ನು ಅಕ್ರಮವಾಗಿ ಪಿಎನ್ ಬಿ ಬ್ಯಾಂಕ್ ನ ಅಧಿಕಾರಿಗಳು ನೀರವ್ ಮೋದಿ ಸಂಸ್ಥೆಗೆ ಒದಗಿಸಿದ್ದರು.