ತ್ರಿವೇಂದ್ರಮ್ : ಎಡಪಕ್ಷಗಳ ಅವನತಿ ದೇಶದ ದುರಂತವಾಗಿದ್ದು, ಬಲಿಷ್ಠ ಎಡಪಕ್ಷಗಳ ಅಗತ್ಯತೆ ಹೆಚ್ಚಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ತ್ರಿವೇಂದ್ರಮ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕೀಯ ಪ್ರತಿಸ್ಪರ್ಧೆಯಿಂದಾಗಿ ಎಡಪಕ್ಷಗಳು ಅವನತಿಯಾದರೆ ಭಾರತಕ್ಕೆ ಅನಾರೋಗ್ಯ ಭಾದಿಸಲಿದೆ. ಆದರೆ. ಭಾರತದಲ್ಲಿ ಎಡಪಕ್ಷಗಳ ಅಸ್ತಿತ್ವ ಕೊನೆಗಾಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಎಡಪಕ್ಷಗಳ ಆಶೋತ್ತರಗಳು ಪ್ರಸ್ತುತ ಸಮಾಜಕ್ಕನುಗುಣವಾಗಿ ಬದಲಾವಣೆಯಾಗಬೇಕಾಗಿದೆ ಎಂದು ಜೈರಾಮ್ ರಮೇಶ್ ಸಲಹೆ ನೀಡಿದರು.