ಸಿಮ್ ಕಾರ್ಡ್ ಆಧಾರ್ ಗೆ ಜೋಡಣೆಯಾಗಿರುವ ಬಗ್ಗೆ ತಿಳಿಯುವ ಸೌಲಭ್ಯ ಒದಗಿಸಿ: ಟೆಲಿಕಾಂ ಸಂಸ್ಥೆಗಳಿಗೆ ಯುಐಡಿಎಐ
ನವದೆಹಲಿ: ಮೊಬೈಲ್ ಗ್ರಾಹಕರು ಸಿಮ್ ಕಾರ್ಡ್ ಆಧಾರ್ ಗೆ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಯುವ ಸೌಲಭ್ಯವನ್ನು ಒದಗಿಸುವಂತೆ ಎಲ್ಲಾ ಟೆಲಿಕಾಂ ಸಂಸ್ಥೆಗಳಿಗೂ ಯುಐಡಿಎಐ ಸೂಚನೆ ನೀಡಿದೆ.
ಮಾ.15 ರ ಒಳಗೆ ಈ ಸೌಲಭ್ಯ ಒದಗಿಸುವಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಎಲ್ಲಾ ಟೆಲಿಕಾಂ ಸಂಸ್ಥೆಗಳಿಗೂ ಸೂಚನೆ ನೀಡಿದೆ.
ಕೆಲವು ರಿಟೆಲರ್ ಗಳು, ಆಪರೇಟರ್ ಗಳು ಆಧಾರ್ ನ್ನು ಮೊಬೈಲ್ ನಂಬರ್ ಗೆ ಲಿಂಕ್ ಮಾಡಿಸುವುದನ್ನೇ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಆಧಾರ್ ಹೊಂದಿರುವವರ ನಂಬರ್ ನ್ನು ಬೇರೆಯವರ ಆಧಾರ್ ನೊಂದಿಗೆ ಜೋಡಣೆ ಮಾಡುವುದಕ್ಕೆ ಪ್ರಾರಂಭಿಸಿರುವ ಪ್ರಕರಣಗಳು ಕಂಡುಬಂದಿದೆ ಈ ಹಿನ್ನೆಲೆಯಲ್ಲಿ ಯುಐಡಿಎಐ ಮೊಬೈಲ್ ಗ್ರಾಹಕರಿಗೆ ತಮ್ಮ ಸಿಮ್ ಕಾರ್ಡ್ ಆಧಾರ್ ಗೆ ಜೋಡಣೆಯಾಗಿದೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ಪಡೆಯುವ ಸೌಲಭ್ಯ ನೀದಬೇಕೆಂದು ಹೇಳಿದೆ.
ಇದೇ ವೇಳೇ ಈ ರೀತಿಯ ಅಕ್ರಮಗಳು ನಡೆಯದಂತೆ ಟೆಲಿಕಾಂ ಆಪರೇಟರ್ ಗಳು ಎಚ್ಚರಿಕೆ ವಹಿಸಬೇಕೆಂದು ಟೆಲಿಕಾಂ ಆಪರೇಟರ್ ಗಳಿಗೆ ಯುಐಡಿಎಐ ಹೇಳಿದೆ.