ದೇಶ

ವಿಮಾನ ಚಾಲನೆಗೆ ಲಿಂಗಬೇಧ ಇಲ್ಲ: ಮೊದಲ ಮಹಿಳಾ ವಾಯುಪಡೆ ಪೈಲಟ್ ಅವಾನಿ ಚತುರ್ವೇದಿ

Nagaraja AB

ಜಾಮ್ ನಗರ : ವಿಮಾನ ಚಲಾಯಿಸಲು ಲಿಂಗಬೇಧವಿಲ್ಲಾ ಎಂದು ಎಂದು ಭಾರತದ ಮೊದಲ ಮಹಿಳಾ ವಾಯುಪಡೆ ಪೈಲಟ್ ಅವಾನಿ ಚತುರ್ವೇದಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಮಾನ ಒಂದು ಯಂತ್ರವಾಗಿದ್ದು, ಪುರುಷ ಅಥವಾ ಮಹಿಳೆಯರು ನಿರ್ವಹಣೆ ಮಾಡುತ್ತಿದ್ದಾರೆಯೇ ಎಂಬುದು ಅದಕ್ಕೆ ಗೊತ್ತಿರುವುದಿಲ್ಲ. ಬಾಲಕರಾಗಲೀ ಅಥವಾ ಬಾಲಕೀಯಾಗಲೀ ವಿಮಾನ ಚಾಲನಾ ವೃತ್ತಿಯಲ್ಲಿ ಸಮಾನರಾಗಿರುತ್ತಾರೆ ಎಂದರು.

ಆಕಾಶದಲ್ಲಿ ಹಾರಾಡಬೇಕೆಂದು, ನನ್ನ ಬಾಲ್ಯದಿಂದಲೂ ಕನಸಾಗಿತ್ತು. ಈಗ ಪೈಲಟ್ ಆಗಿದ್ದು, ಹಕ್ಕಿಯಂತೆ ಹಾರಾಟ ನಡೆಸುತ್ತಿದ್ದೇನೆ.
ವಾಯುಪಡೆಯ ಪೈಲಟ್ ಆಗಿ ಸಾಕಷ್ಟು ಕಲಿತಿದ್ದೇನೆ. ಇನ್ನೂ ಕಲಿಯುತ್ತಿದ್ದು, ರಕ್ಷಣಾ ತಂಡಕ್ಕೆ ಬೆಂಬಲ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಗುಜರಾತಿನ ಜಾಮ್ ನಗರದಲ್ಲಿ ಫೆಬ್ರವರಿ ತಿಂಗಳಲ್ಲಿ ಮಿಗ್ -21 ಬಿಸನ್ ವಾಯುುಪಡೆ ವಿಮಾನ  ಹಾರಾಟ  ನಡೆಸುವ ಮೂಲಕ ಅವಾನಿ ಹೊಸ ಇತಿಹಾಸ ಸೃಷ್ಟಿಸಿದ್ದರು.  2016 ಜೂನ್ 18 ರಂದು ಭಾರತೀಯ ವಾಯುಪಡೆಗೆ ಅವರು ಸೇರ್ಪಡೆಗೊಂಡಿದ್ದರು.

ಬ್ರಿಟನ್, ಅಮೆರಿಕಾ, ಇಸ್ರೇಲ್, ಪಾಕಿಸ್ತಾನದಂತಹ ಆಯ್ದ ದೇಶಗಳಲ್ಲಿ ಮಾತ್ರ ಮಹಿಳೆಯರು ವಾಯುಪಡೆ ಪೈಲಟ್ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಕೇಂದ್ರಸರ್ಕಾರ 2015ರಲ್ಲಿ ಮಹಿಳೆಯರು ವಾಯುಪಡೆಯಲ್ಲಿ ಕಾರ್ಯನಿರ್ವಹಿಸುವ ನಿರ್ಧಾರವನ್ನು ಪ್ರಕಟಿಸಿತ್ತು

, 2017 ಡಿಸೆಂಬರ್ 16 ರಂದು ಎರಡನೇ ಬ್ಯಾಚಿನಲ್ಲಿ ಇಬ್ಬರು ಮಹಿಳೆಯರು ವಾಯುಪಡೆಗೆ ಸೇರ್ಪಡೆಗೊಂಡರು. 1992ರ ನಂತರ ಸೇನೆಯಲ್ಲಿನ  ಮೆಡಿಕಲ್ ಮತ್ತಿತರ ವಿಭಾಗಗಳಲ್ಲಿ ಮಹಿಳೆಯರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

SCROLL FOR NEXT