ಪಾಸ್ ಪೋರ್ಟ್ 
ದೇಶ

50 ಕೋಟಿ ರೂ. ಗಿಂತ ಹೆಚ್ಚು ಸಾಲ ಪಡೆದವರ ಪಾಸ್ ಪೋರ್ಟ್ ಮಾಹಿತಿ ಕಡ್ಡಾಯ!

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರ ಇಂತಹ ವಂಚನೆ ಹಾಗೂ ವಂಚಕರು ದೇಶದಿಂದ ಬಿಟ್ಟು ಹೊರಗೆ ಹೋಗದಂತೆ ತಡೆಯಲು ಮುಂದಾಗಿದೆ.

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರ ಇಂತಹ ವಂಚನೆ ಹಾಗೂ ವಂಚಕರು ದೇಶದಿಂದ ಬಿಟ್ಟು ಹೊರಗೆ ಹೋಗದಂತೆ ತಡೆಯಲು ಮುಂದಾಗಿದೆ. 50  ಕೋಟಿ ಗೂ ಹೆಚ್ಚು ಸಾಲ ಪಡೆದವರ ಪಾರ್ಸ್ ಪೋರ್ಟ್ ಮಾಹಿತಿ ಕಡ್ಡಾಯಗೊಳಿಸಲಾಗಿದೆ .

ವಂಚಕರು ದೇಶ ಬಿಡುವ ಸಂದರ್ಭದಲ್ಲಿ ಸಂಬಂಧಿಸಿದ ಸಂಸ್ಥೆಗೆ ಮಾಹಿತಿ ತಿಳಿಸಲು ಹಾಗೂ ಬ್ಯಾಂಕುಗಳು ಆ ವೇಳೆಯಲ್ಲಿ ಕ್ರಮ ಕೈಗೊಳ್ಳಲು ಪಾಸ್ ಪೋರ್ಸ್ ಮಾಹಿತಿಯಿಂದ ನೆರವಾಗಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರವನ್ನು ಸ್ವಚ್ಛ ಮತ್ತು ಜವಾಬ್ದಾರಿಯುತವಾಗಿ ಮಾಡುವುದು ಮುಂದಿನ ಕ್ರಮವಾಗಿದೆ. 50 ಕೋಟಿ ಗೂ ಹೆಚ್ಚು ಸಾಲಕ್ಕೆ ಪಾಸ್ ಪೋರ್ಸ್ ಮಾಹಿತಿ ಅಗತ್ಯ.ಇದರಿಂದಾಗಿ ವಂಚನೆ ಪ್ರಕರಣಗಳಿಗೆ ಕ್ಷೀಪ್ರವಾಗಿ ಪ್ರತಿಕ್ರಿಯಿಸಬಹುದು ಎಂದು ಹಣಕಾಸು ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.

50 ಕೋಟಿ ಗೂ ಹೆಚ್ಚು ಸಾಲ ಪಡೆದವರ ಪಾಸ್ ಪೋರ್ಟ್ ಮಾಹಿತಿಯನ್ನು 45 ದಿನಗಳಲ್ಲಿ ಬ್ಯಾಂಕುಗಳು ಸಂಗ್ರಹಿಸುವಂತೆ ಅವರು ಸೂಚಿಸಿದ್ದಾರೆ. ಪಾಸ್ ಪೋರ್ಟ್ ಮಾಹಿತಿ ಇಲ್ಲದಿದ್ದರೆ. ದೇಶ ಬಿಟ್ಟು ಬೇರೆ ದೇಶಕ್ಕೆ ಪಲಾಯನ ಮಾಡುವ ವಂಚಕರ ವಿರುದ್ಧ ಬ್ಯಾಂಕುಗಳು ಸರಿಯಾಗಿ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಆಭರಣ ಉದ್ಯಮಿ ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ 12.700 ಕೋಟಿ ರೂ ವಂಚಿಸಿ ಪರಾರಿಯಾದ ಬಳಿಕ  ವಸೂಲಾಗದ ಆರ್ಥಿಕ ವಂಚಕರ ಬಿಲ್ ಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 

ಇಂತಹ ಪ್ರಕರಣಗಳಲ್ಲಿ ಅವರ ಆಸ್ತಿಪಾಸ್ತಿ ಜಪ್ತಿ ಮಾಡುವುದು ಈ ಕಾನೂನಿನ ಉದ್ದೇಶವಾಗಿದೆ.100 ಕ್ಕೂ ಹೆಚ್ಚು ಕೋಟಿ ವಂಚಿಸಿ ದೇಶ ತೊರೆಯುವವರೆಗೂ ಇದು ಅನ್ವಯವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!