ನಿತಿನ್ ಗಡ್ಕರಿ 
ದೇಶ

ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ, ನಾನು ತೃಪ್ತಿದಾಯಕ ಮನುಷ್ಯ: ನಿತಿನ್ ಗಡ್ಕರಿ

ತಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲಾ ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸ್ಪಷ್ಪಪಡಿಸಿದ್ದು, ತನ್ನಸಾಧನೆಯ ಬಗ್ಗೆ ತೃಪ್ತಿ ಇರುವುದಾಗಿ ಹೇಳಿದ್ದಾರೆ.

ದೆಹಲಿ: ತಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲಾ ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸ್ಪಷ್ಪಪಡಿಸಿದ್ದು, ತನ್ನಸಾಧನೆಯ ಬಗ್ಗೆ ತೃಪ್ತಿ ಇರುವುದಾಗಿ ಹೇಳಿದ್ದಾರೆ.

 ದೆಹಲಿಯಲ್ಲಿಂದು ಇಂಡಿಯಾ ಟುಡೇ ಕಾನ್ ಕ್ಲೇವ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಮೈತ್ರಿ ಪಕ್ಷಗಳೊಂದಿಗಿನ  ಸಂಬಂಧ ತಗ್ಗಿದ್ದು,  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಗತ್ಯ ಮತ ಪಡೆಯುವಲ್ಲಿ ವಿಫಲರಾದರೆ ನೀವು ಒಮ್ಮತ ಅಭ್ಯರ್ಥಿಯಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ನರೇಂದ್ರಮೋದಿ ನಾಯಕತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಹುದ್ದೆಯ ಕನಸು ತಮ್ಮಗಿಲ್ಲಾ, ಆ ಹುದ್ದೆಯ ಆಕಾಂಕ್ಷಿಯೂ ಅಲ್ಲ, ನಾನು ತೃಪ್ತಿದಾಯಕ ಮನುಷ್ಯ ಎಂದ ಗಡ್ಕರಿ, ಪ್ರಧಾನಿ ನರೇಂದ್ರಮೋದಿ ನಾಯಕತ್ವದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಇರುವುದಾಗಿ ಹೇಳಿದರು.

ನನ್ನ ಸಾಮರ್ಥ್ಯ ಹಾಗೂ ಸ್ಥಾನಮಾನಕ್ಕೆ ತಕ್ಕಂತೆ  ಕಾರ್ಯನಿರ್ವಹಿಸುತ್ತೇನೆ, ಯಾರಿಗೂ ತನ್ನ ಪೋಟೋ ಕೊಡುವುದಿಲ್ಲ, ಎಲ್ಲಿಯೂ ವೈಯಕ್ತಿಕ ವಿವರ ನೀಡುವುದಿಲ್ಲ. ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡುವುದಾಗಿ ಹೇಳಿದ ನಿತಿನ್ ಗಡ್ಕರಿ, ಮುಂಬರುವ ಚುನಾವಣೆ ವೇಳೆಗೆ ಎಲ್ಲಾ ಮೈತ್ರಿ ಪಕ್ಷಕ್ಕೆ ಪತ್ತೆ ಪಕ್ಷ ಸೇರುವ ವಿಶ್ವಾಸವಿದೆ ಎಂದರು.

ಮಹಾರಾಷ್ಟ್ರದ ಸಂಸ್ಕೃತಿಯನ್ನು ಹೆಚ್ಚಾಗಿ ಪ್ರೀತಿಸುತ್ತೇನೆ. ದೆಹಲಿಯಲ್ಲಿಯೇ ಚೆನ್ನಾಗಿದ್ದೇನೆ. ಸಂಕಷ್ಟದ ಸಂದರ್ಭ ಒದಗಿಬಂದರೆ ಮುಂಬೈಗೆ ಮರಳುವ ಉದ್ದೇಶವಿಲ್ಲಾ. ಇದನ್ನು ಬಿಜೆಪಿ ನಾಯಕರೇ ತಿಳಿಸಿದ್ದಾರೆ ಎಂದು ನಿತಿನ್ ಗಡ್ಕರಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

SCROLL FOR NEXT