ಸಂಗ್ರಹ ಚಿತ್ರ 
ದೇಶ

ಪ್ಯಾರಿಸ್ ಒಪ್ಪಂದ: ಅಮೆರಿಕ ವಿರುದ್ಧ ಮ್ಯಾಕ್ರನ್ ಕಿಡಿ, ಭಾರತದ ನಡೆಗೆ ಮುಕ್ತ ಶ್ಲಾಘನೆ

ಜಾಗತಿಕ ತಾಪಮಾನ ನಿಯಂತ್ರಣ ಸಂಬಂಧ ಪ್ಯಾರಿಸ್ ಒಪ್ಪಂದ ನಿರಾಕರಿಸಿದ ಅಮೆರಿಕ ನಡೆಯನ್ನು ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ಅವರು ಟೀಕಿಸಿದ್ದಾರೆ. ಅಂತೆಯೇ ಭಾರತದ ನಡೆಯನ್ನು ಮುಕ್ತಕಂಠದಿದ ಶ್ಲಾಘಿಸಿದ್ದಾರೆ.

ನವದೆಹಲಿ: ಜಾಗತಿಕ ತಾಪಮಾನ ನಿಯಂತ್ರಣ ಸಂಬಂಧ ಪ್ಯಾರಿಸ್ ಒಪ್ಪಂದ ನಿರಾಕರಿಸಿದ ಅಮೆರಿಕ ನಡೆಯನ್ನು ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ಅವರು ಟೀಕಿಸಿದ್ದಾರೆ. ಅಂತೆಯೇ ಭಾರತದ ನಡೆಯನ್ನು ಮುಕ್ತಕಂಠದಿದ ಶ್ಲಾಘಿಸಿದ್ದಾರೆ.
ದೆಹಲಿಯಲ್ಲಿ ನಡೆದ ಶೃಂಗಸಭೆಯಲ್ಲಿ ಮಾತನಾಡಿದ ಮ್ಯಾಕ್ರನ್ ಅವರು, ಅಂತಾರಾಷ್ಟ್ರೀಯ ಸೋಲಾರ್ ಮೈತ್ರಿಕೂಟ ರಚನೆ ಸಂಬಂಧ ಭಾರತದ ನಡೆ ಅತ್ಯಂತ ಸ್ವಾಗತಾರ್ಹವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕನಸು ಕಂಡರು. ಆ ಕನಸನ್ನು ಇದೀಗ ನಾನು ಒಗ್ಗೂಡಿ ನನಸು ಮಾಡುತ್ತಿದ್ದೇವೆ. ಇದೀಗ ಅಂತಾರಾಷ್ಟ್ರೀಯ ಸೋಲಾರ್ ಮೈತ್ರಿಕೂಟ ರಚನೆಯಾಗುತ್ತಿದೆ. ಎರಡು ವರ್ಷಗಳ ಹಿಂದೆ ಇದು ಕೇವಲ ಪ್ರಸ್ತಾವನೆಯಾಗಿತ್ತು. ಆದರೆ ಇದೀಗ ಅದು ನನಸಾಗುತ್ತಿದ್ದು, ನಿಗದಿಗಿಂತ ವೇಗವಾಗಿ ನಾವು ಅದನ್ನು ನನಸು ಮಾಡುತ್ತಿದ್ದೇವೆ. ಅದರ ಬದಲಾವಣೆಯನ್ನು ನಾವೀಗ ಕಾಣುತ್ತಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಭಾರತೀಯ ಮಹಿಳಾ ಸೋಲಾರ್ ಎಂಜಿನಿಯರ್ ಗಳ ಕುರಿತು ಮಾತನಾಡಿದ ಮ್ಯಾಕ್ರನ್ ಅವರು, ಮಹಿಳಾ ಎಂಜಿನಿಯರ್ ಗಳು ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ನಿಮ್ಮ ವೇಗವನ್ನು ನೋಡುತ್ತಿದ್ದರೆ ನಿಜ್ಕಕೂ ಖುಷಿಯಾಗುತ್ತದೆ. ಆದರೆ ಅಮರಿಕದಂತಹ ದೇಶಗಳು ನಿಮ್ಮ ಕಾರ್ಯವನ್ನು ನೋಡಿ ತಮಗೂ ಒಕ್ಕೂಟದಲ್ಲಿ ಸೇರಬೇಕು ಎಂದೆನಿಸಬಹುದು. ನನಗೆ ವಿಶ್ವಾಸವಿದ್ದು, ಖಂಡಿತ ಅಮೆರಿಕದಂತಹ ರಾಷ್ಟ್ರಗಳೂ ಕೂಡ ತಮ್ಮ ನಾಗರಿಕರ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಕಾರ್ಯಕ್ಕೆ ಕೈ ಜೋಡಿಸುತ್ತವೆ ಎಂದು ಮ್ಯಾಕ್ರನ್ ಹೇಳಿದರು. 
ಈ ಹಿಂದೆ ಹವಾಮಾನ ಬದಲಾವಣೆಯನ್ನು ತಡೆಯುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ 2015ರಲ್ಲಿ ಮಾಡಲಾದ ಮಹತ್ವದ ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದರು. ಭಾರತ ಮತ್ತು ಚೀನಾದಂತಹ ದೇಶಗಳಿಗೆ ಲಾಭಕರವಾಗಿರುವ ಈ  ಕ್ರೂರ ಒಪ್ಪಂದ ಅಮೆರಿಕಕ್ಕೆ ಅನ್ಯಾಯ ಮಾಡಿದೆ ಎಂದು ಅವರು ಆರೋಪಿಸಿದ್ದರು. ಪ್ಯಾರಿಸ್‌ ಒಪ್ಪಂದವು ಅಮೆರಿಕದ ಅರ್ಥವ್ಯವಸ್ಥೆಗೆ ಮಾರಕವಾಗಿದೆ.  ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುತ್ತದೆ. ಅಮೆರಿಕದ ಸಾರ್ವಭೌಮತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಟ್ರಂಪ್ ಆರೋಪಿಸಿದರು. ಆದರೆ, ಜಗತ್ತಿನ ಎಲ್ಲ ಪ್ರಮುಖ ದೇಶಗಳ ಮುಖ್ಯಸ್ಥರು ಟ್ರಂಪ್‌ ನಿರ್ಧಾರವನ್ನು ವಿರೋಧಿಸಿದ್ದರು. ಹಾಗಾಗಿ ಈ ವಿಚಾರದಲ್ಲಿ ಅಮೆರಿಕ ಒಬ್ಬಂಟಿಯಾಗಿತ್ತು. 
ಒಪ್ಪಂದ ಏನು?
ಕೈಗಾರಿಕೀಕರಣದ ದಿನಗಳಲ್ಲಿ ಇದ್ದುದಕ್ಕಿಂತ ಜಾಗತಿಕ ತಾಪಮಾನ  ಶೇ 2 ಡಿಗ್ರಿ ಸೆಲ್ಸಿಯಸ್‌ಗಿಂತ ಏರಿಕೆ ಆಗದಂತೆ ನೋಡಿಕೊಳ್ಳಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಏರಿಕೆಯನ್ನು ಶೇ 1.5 ಡಿಗ್ರಿ ಸೆಲ್ಸಿಯಸ್‌ನೊಳಗೇ ಇರಿಸುವುದು ಒಪ್ಪಂದದ ಗುರಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT