ದೇಶ

ಉಗ್ರರಿಗೆ ಆರ್ಥಿಕ ನೆರವು ಪ್ರಕರಣ; ಹಿಜ್ಬುಲ್ ಮುಖ್ಯಸ್ಥ ಸಲಹುದ್ದೀನ್ ಪುತ್ರ ಸೇರಿ 6 ಮಂದಿ ವಿಚಾರಣೆ

Manjula VN
ನವದೆಹಲಿ: ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸುವ ಸಲುವಾಗಿ ಉಗ್ರರಿಗೆ ನೀಡಲಾದ ಆರ್ಥಿಕ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಹುದ್ದೀನ್ ಪುತ್ರ ಸೇರಿ ಒಟ್ಟು 6 ಮಂದಿಯನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಬುಧವಾರ ವಿಚಾರಣೆಗೊಳಪಡಿಸಿದ್ದಾರೆ. 
ಶ್ರೀನಗರ ಶೆರ್-ಇ-ಕಾಶ್ಮೀರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್'ನಲ್ಲಿ  ವೈದ್ಯಕೀಯ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಶಕೀಲ್ ಯೂಸುಫ್ ಸೇರಿ ಒಟ್ಟು ಆರು ಮಂದಿಯನ್ನು ದಕ್ಷಿಣ ದೆಹಲಿಯಲ್ಲಿರುವ ಎನ್ಐಎ ಮುಖ್ಯ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. 
ಅಮೆರಿಕ ಮೂಲದ ಅಂತರಾಷ್ಟ್ರೀಯ ವೈರ್ ಟ್ರಾನ್ಸ್ವರ್ ಕಂಪನಿಯ ಮೂಲಕ ಶಕೀಲ್ ತಂದೆ ಉಗ್ರರಿಗೆ ಹಣವನ್ನು ವರ್ಗಾವಣೆ ಮಾಡಿದ್ದ. ಈ ಕುರಿತಂತೆ ಯೂಸುಫ್ ನನ್ನು ವಿಚಾರಣೆಗೊಳಪಡಿಸಲು ಎನ್ಐಎ ನಿರ್ಧರಿಸಿತ್ತು. 
ಇದಲ್ಲದೆ, ಯೂಸುಫ್'ಗೆ ಹವಾಲಾ ದಂಧೆಕೋರರಾದ ಸೌದಿ ಅರೇಬಿಯಾದ ಏಜಾಜ್ ಅಹ್ಮದ್ ಭಟ್ ಸೇರಿ ಹಲವರೊಂದಿಗೆ ಸಂಪರ್ಕವನ್ನು ಹೊಂದಿದ್ದಾನೆ. ಇದಲ್ಲದೆ, ಹಣ ವರ್ಗಾವಣೆ ಕುರಿತ ಕೋಡ್ ಗಳನ್ನು ದೂರವಾಣಿ ಮೂಲಕ ಪಡೆದುಕೊಳ್ಳುತ್ತಿದ್ದ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ. 
SCROLL FOR NEXT