ಬೆಂಗಳೂರು: ಮೆಟ್ರೋ ಸ್ಟೇಷನ್ ತಲುಪಲು ಪ್ರಮುಖ ಬಸ್ ನಿಲ್ದಾಣಗಳಲ್ಲಿ ಬಾಡಿಗೆ ಬೈಕ್ ಲಭ್ಯ
ಬಸ್ ನಿಲ್ದಾಣದಿಂದ ಮೆಟ್ರೋ ಸ್ಟೇಷನ್ ಗೆ ತೆರಳಲು ಬೈಸಿಕಲ್ ಮತ್ತು ಬೈಕ್ ಗಳನ್ನು ಬಾಡಿಗೆಗೆ ನೀಡುವ ಹೊಸ ಸೇವೆಗೆ ಸಚಿವ ಎಚ್.ಎಂ ರೇವಣ್ಣ ಚಾಲನೆ ನೀಡಿದ್ದಾರೆ
ಬೆಂಗಳೂರು: ಬಸ್ ನಿಲ್ದಾಣದಿಂದ ಮೆಟ್ರೋ ಸ್ಟೇಷನ್ ಗೆ ತೆರಳಲು ಬೈಸಿಕಲ್ ಮತ್ತು ಬೈಕ್ ಗಳನ್ನು ಬಾಡಿಗೆಗೆ ನೀಡುವ ಹೊಸ ಸೇವೆಗೆ ಸಚಿವ ಎಚ್.ಎಂ ರೇವಣ್ಣ ಚಾಲನೆ ನೀಡಿದ್ದಾರೆ.
ಬುಧಾವರ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಈ ಹೊಸ ಸೇವೆಗೆ ಚಾಲನೆ ನೀಡಿದ್ದಾರೆ. ಮೊದಲಿಗೆ ಮೂರು ತಿಂಗಳ ಕಾಲ ಟ್ರಯಲ್ ನೋಡಲಾಗುವುದು, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಈ ಸೇವೆ ಲಭ್ಯವಾಗಲಿದೆ.
ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್ ಮಾರುಕಟ್ಟೆ ಬಸ್ ನಿಲ್ದಾಣಗಳಲ್ಲಿ ಸೇವೆ ಆರಂಭವಾಗಿದ್ದು, 1 ನಿಮಿಷಕ್ಕೆ 50 ಪೈಸೆ ಹಾಗೂ 1 ಕಿಮೀಗೆ 5 ರೂ ದರ ನಿಗದಿ ಪಡಿಸಲಾಗಿದೆ. ಬಳಕೆದಾರರು ತಮ್ಮ ಮೊಬೈಲ್ ನಲ್ಲಿ ಆ್ಯಪ್ ದೌಡ ಲೋಡ್ ಮಾಡಿಕೊಂಡು, ತಮಗೆ ಹತ್ತಿರವಾದ ಸ್ಥಳದಿಂದ ಬುಕ್ ಮಾಡಬಹುದಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.