ಬಾತ್ ತಬ್ ನಲ್ಲಿ ಮುಗ್ಗರಿಸಿದ ಹಿಲರಿ ಕ್ಲಿಂಟನ್ ಕೈ ಮುರಿತ , ವೈದ್ಯರಿಂದ ಚಿಕಿತ್ಸೆ 
ದೇಶ

ಬಾತ್ ಟಬ್ ನಲ್ಲಿ ಮುಗ್ಗರಿಸಿದ ಹಿಲರಿ ಕ್ಲಿಂಟನ್ ಕೈ ಮುರಿತ ,ವೈದ್ಯರಿಂದ ಚಿಕಿತ್ಸೆ

ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಪತ್ನಿ ಹಿಲರಿ ಕ್ಲಿಂಟನ್ ಬಾತ್ ಟಬ್ ನಲ್ಲಿ ಮುಗ್ಗರಿಸಿ ಬಿದ್ದ ಕಾರಣ ಕೈ ಮುರಿದುಕೊಂಡಿದ್ದಾರೆ ಎಂದು ವರದಿಯಾಗಿದೆ.

ನವದೆಹಲಿ: ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಪತ್ನಿ ಹಿಲರಿ ಕ್ಲಿಂಟನ್  ಬಾತ್ ಟಬ್ ನಲ್ಲಿ ಮುಗ್ಗರಿಸಿ ಬಿದ್ದ ಕಾರಣ ಕೈ ಮುರಿದುಕೊಂಡಿದ್ದಾರೆ ಎಂದು ವರದಿಯಾಗಿದೆ. 
ಭಾರತ ಪ್ರವಾಸದಲ್ಲಿರುವ ಹಿಲರಿ ಕ್ಲಿಂಟನ್  ರಾಜಾಸ್ಥಾನದ ಜೋಧಪುರದ ಉಮೈದ್ ಭವನ್ ಪ್ಯಾಲೇಸ್ ನಲ್ಲಿ ತಂಗಿದ್ದರು.  
ಬಾತ್ ಟಬ್ ನಲ್ಲಿ ಬಿದ್ದ ಕಾರಣ ಅವರ ಬಲ ಕೈಗೆ ನೋವಾಗಿತ್ತು. ಇದೀಗ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.ಎಂದು ಗೋಯಲ್ ಆಸ್ಪತ್ರೆಯ ವೈದ್ಯರು ಎ ಎಫ್ ಪಿಗೆ ತಿಳಿಸಿದ್ದಾರೆ. ನಾವು ಸಿಟಿ ಸ್ಕ್ಯಾನ್ ಮತ್ತು ಎಕ್ಸ್ ರೆ ಮಾಡಿದ್ದೇವೆ. ಕ್ಲಿಂಟನ್ ಅವರ ಮಣಿಕಟ್ಟಿನ ಭಾಗ ಮುರಿದಿರುವುದು ಕಂಡುಬಂದಿದೆ. ಅವರಿಗೆ ಕೆಲ ದಿನಗಳ ಕಾಲ ವಿಶ್ರಾಂತಿ ಅಗತ್ಯವಿದೆ  ಆಕೆಗೆ ಕ್ರೇಪ್ ಬ್ಯಾಂಡೇಜ್ ಬಳಸಲು ಸಲಹೆ ನಿಡಿದ್ದೇವೆ." ವೈದ್ಯರು ಹೇಳಿದ್ದಾರೆ.
ಕಳೆದ ಐದು ತಿಂಗಳ ಹಿಂದೆ ಲಂಡನ್ ನಲ್ಲಿ ಕ್ಲಿಂಟನ್ ತಮ್ಮ ಕಾಲಿನ ಬೆರಳು ಮುರಿತಕ್ಕೆ ಒಳಗಾಗಿದ್ದರು, ಇಂದು ಮತ್ತೆ ಬಾತ್ ಟಬ್ ನಲ್ಲಿ ಬೀಳುವ ಮೂಲಕ ಕೈ ಮುರಿದುಕೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿದೆ.
ಡೊನಾಲ್ಡ್ ಟ್ರಂಪ್ ವಿರುದ್ಧ 2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಕಥೆಯನ್ನು ಹೇಳುವ ಕ್ಲಿಂಟನ್ ಅವರ ಪುಸ್ತಕ ’ವಾಟ್ಸ್ ಹ್ಯಾಪನಡ್’ ನ ಪ್ರಚಾರಕ್ಕಾಗಿ ಆಕೆ ಬಾರತಕ್ಕೆ ಆಗಮಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

1 ಓವರ್‌ನಲ್ಲಿ 29 ರನ್ ಹೊಡೆಸಿಕೊಂಡ ಬಿಷ್ಣೋಯ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಕೈಚೆಲ್ಲಿದ ಭಾರತ

ನಾನು ಸೋತಿದ್ದೇನೆ, ಸತ್ತಿಲ್ಲ: TMC ಕೇಂದ್ರ ಕಚೇರಿಗೆ ಬಿಗ... ಬಂಡಾಯ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ಗರಂ

E20 Petrol: ವೈಜ್ಞಾನಿಕ ಪರೀಕ್ಷೆಗಳಲ್ಲಿ ಸುರಕ್ಷಿತ, ವಾಹನಗಳಿಗೆ ಅತ್ಯುತ್ತಮ; ತಜ್ಞರ ಸಮರ್ಥನೆ

ಮೆಲ್ಬೋರ್ನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ; ಆಸ್ಟ್ರೇಲಿಯಾದಿಂದ ತನಿಖೆ