ದೇಶ

ವಿವಾದಿತ ಧಾರ್ಮಿಕ ಸ್ಥಳಗಳಲ್ಲಿ ನಮಾಜ್‌ಗೆ ಅವಕಾಶಬೇಡ: ಶಿಯಾ ವಕ್ತ್ ಬೋರ್ಡ್

Vishwanath S
ಲಖನೌ: ದೇಶದಲ್ಲಿನ ವಿವಾದಿತ ಧಾರ್ಮಿಕ ಸ್ಥಳದಲ್ಲಿ ಮುಸ್ಲಿಂ ಸಮುದಾಯದವರು ನಮಾಜ್ ನಡೆಸಲು ಅವಕಾಶ ನೀಡಬಾರದು ಎಂಬ ಹೊಸ ಸಲಹೆಯನ್ನು ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ತ್ ಬೋರ್ಡ್(ಯುಪಿಎಸ್ಸಿಡಬ್ಲ್ಯೂಬಿ)ನ ಮುಖ್ಯಸ್ಥ ಡಾ.ವಸೀಂ ರಿಜ್ವಿ ಅವರು ಆಲ್ ಇಂಡಿಯಾ ಮುಸ್ಲಿಂ ವರ್ಸನಲ್ ಲಾ ಬೋರ್ಡ್(ಎಐಎಂಪಿಎಲ್ಬಿ)ಗೆ ನೀಡಿದ್ದಾರೆ. 
ಭಾರತದಲ್ಲಿ ಒಟ್ಟು 9 ವಿವಾದಿತ ಧಾರ್ಮಿಕ ಸ್ಥಳಗಳಿವೆ. ಅವುಗಳಲ್ಲಿ ಉತ್ತರಪ್ರದೇಶದಲ್ಲಿ ನಾಲ್ಕು, ಗುಜರಾತ್ ನಲ್ಲಿ ಎರಡು, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ದೆಹಲಿ ತಲಾ ಒಂದು ಧಾರ್ಮಿಕ ಸ್ಥಳವಿದೆ. ಅಲ್ಲಿ ಮುಸ್ಲಿಂರು ನಮಾಜ್ ನಡೆಸುವುದನ್ನು ನಿಲ್ಲಿಸಬೇಕು ಎಂದು ರಿಜ್ವಿ ಅವರು ಎಐಎಂಪಿಎಲ್ಬಿ ಅಧ್ಯಕ್ಷ ಮೌಲಾನಾ ರಬಿ ಹಸನ್ ಅವರಿಗೆ ಪತ್ರ ಬರೆದಿದ್ದಾರೆ. 
ಈ ವಿವಾದಿತ ಧಾರ್ಮಿಕ ಸ್ಥಳಗಳಲ್ಲಿ ಹಿಂದೆ ಹಿಂದೂ ದೇವಾಲಯಗಳಿದ್ದು ಮುಸ್ಲಿಂ ಅರಸರು ಬಲವಂತದಿಂದ ಅವುಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿರುವ ಬಗ್ಗೆ ಇತಿಹಾಸದಲ್ಲಿ ಸಾಕಷ್ಟು ಪುರಾವೆಗಳಿವೆ. ಇಂತಹ ಸ್ಥಳಗಳಲ್ಲಿ ಮಸೀದಿ ನಿರ್ಮಿಸುವುದಕ್ಕೆ ಇಸ್ಲಾಮಿಕ್ ಕಾನೂನುಗಳು ಅವಕಾಶ ನೀಡುವುದಿಲ್ಲ. ಮಾತ್ರವಲ್ಲ ಅಂತಹ ಮಸೀದಿಗಳಲ್ಲಿ ಮುಸ್ಲಿಂರು ಸಲ್ಲಿಸುವ ಪ್ರಾರ್ಥನೆ ಕುರಾನ್ ಮತ್ತು ಶರಿಯಾದಲ್ಲಿ ಸ್ವೀಕೃತವಾಗುವುದಿಲ್ಲ ಎಂದು ರಿಜ್ವಿ ಹೇಳಿದ್ದಾರೆ. 
SCROLL FOR NEXT