ನವದೆಹಲಿ: ಸಾಮಾನ್ಯವಾಗಿ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಮುಸ್ಲಿಮನಾಗಿದ್ದರೂ ನಾನು ರಾಮಭಕ್ತ ಎಂದು ಹೇಳಿದ್ದಾರೆ.
ಜೀ ವಾಹಿನಿ ಆಯೋಜಿಸಿದ್ದ ಕಾನ್ಕ್ಲೇವ್ ನಲ್ಲಿ ಭಾಗವಹಿಸಿದ್ದ ವೇಳೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿರುವ ಫಾರೂಕ್ ಅಬ್ದುಲ್ಲಾ, ಪಾಕಿಸ್ತಾನ ಹಾಗೂ ರಾಷ್ಟ್ರವಿರೋಧಿತ್ವ ಎರಡೂ ದೇಶಕ್ಕೆ ಮಾರಕ ಎಂದು ಹೇಳಿದ್ದು, ಆಂತರಿಕ ಅಪಾಯವೇ ಎಲ್ಲದಕ್ಕಿಂತ ದೊಡ್ಡ ಅಪಾಯ ಎಂದು ಹೇಳಿದ್ದಾರೆ.
ನಮ್ಮ ದೇಶವನ್ನು ನಾವೇ ರಕ್ಷಿಸಿಕೊಳ್ಳಬೇಕು ಎಂದು ಹೇಳಿರುವ ಫಾರೂಕ್ ಅಬ್ದುಲ್ಲಾ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಆದರೂ ಪಾಕ್ ವಶದಲ್ಲಿರುವ ಕಾಶ್ಮೀರವನ್ನು ಭಾರತ ವಾಪಸ್ ಪಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ತಾನು ಮುಸ್ಲಿಮನಾಗಿದ್ದರೂ ರಾಮನನ್ನು ಇಷ್ಟಪಡುತ್ತೇನೆ, ನಾನೂ ರಾಮಭಕ್ತ ಎಂದು ಹೇಳಿದ್ದಾರೆ.