ನವದೆಹಲಿ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧದ ಈ ಹಿಂದಿನ ಟೀಕೆಗಳಿಗೆ ಸಂಬಂಧಿಸಿದಂತೆ ಭಾನುವಾರ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿಯನ್ನು ಸರ್ದಾರ್ ಮತ್ತು ಅಸರ್ದಾರ್ ಎಂದೂ ಕರೆದಿದ್ದಾರೆ.
ಇಂದು 84ನೇ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಮಾತನಾಡಿದ ಸಿಧು, ನಾನು ನನ್ನ ತಲೆಯನ್ನು ತಗ್ಗಿಸಿ ಸರ್ದಾರ್ ಮನಮೋಹನ್ ಸಿಂಗ್ ಅವರ ಕ್ಷಮೆ ಕೇಳಲು ಬಯಸುತ್ತೇನೆ ಎಂದರು.
ಮನಮೋಹನ್ ಸಿಂಗ್ ಅವರ ಮೌನ ಏನು ಮಾಡಿದೆ ಎಂಬುದು ಈಗ ನನ್ನ ಅರಿವಿಗೆ ಬರುತ್ತಿದೆ. ಮೌನ ಮಾಡಿದ ಕೆಲಸ ಬಿಜೆಪಿಯ ಶಬ್ದ ಮಾಡಿಲ್ಲ. 10 ವರ್ಷಗಳ ನಂತರ ಯುಪಿಎ ಸರ್ಕಾರದ ಸಾಧನೆಗಳ ಬಗ್ಗೆ ನನಗೆ ಮನವರಿಕೆಯಾಗಿದೆ ಎಂದು ಪಂಜಾಬ್ ಸಚಿವ ಸಿಧು ಹೇಳಿದ್ದಾರೆ.
'ಸರ್, ನೀವು ಜ್ಯೋತಿಷಿಯಾಗಬಹುದು. ಜಿಡಿಪಿ ಶೇ.2ರಷ್ಟು ಕುಸಿತವಾಗುತ್ತದೆ ಎಂದಿದ್ದೀರಿ. ಅದು ನಿಜವಾಯ್ತು ಮತ್ತು ನಿಮ್ಮ ಅವಧಿಯಲ್ಲಿ ತುಂಬಾ ವೇಗವಾಗಿ ಆರ್ಥಿಕ ಪ್ರಗತಿಯಾಗುತ್ತಿತ್ತು. ಈ ದೇಶದ ಅಭಿವೃದ್ಧಿ ಆಮೆಗತಿಯಲ್ಲಿ ಸಾಗಿದೆ' ಎಂದು ಮಾಜಿ ಪ್ರಧಾನಿಯನ್ನು ಸಿಧು ಹಾಡಿ ಹೊಗಳಿದರು.
ನವಜೋತ್ ಸಿಂಗ್ ಸಿಧು ಅವರು ಈ ಹಿಂದೆ ಬಿಜೆಪಿ ಸಂಸದರಾಗಿದ್ದ ವೇಳೆ, ಮನಮೋಹನ್ ಸಿಂಗ್ ಅವರನ್ನು 'ಪಪ್ಪು ಪ್ರಧಾನಿ' ಎಂದು ಟೀಕಿಸಿದ್ದರು. ಆದರೆ ಈಗ ಅವರು ಸರ್ದಾರ್, ಅಸರ್ದಾರ್ ಅಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics